ಕುಮಾರರಾಮ ಜೀವನಚರಿತ್ರೆ ಕೃತಿಯನ್ನು ಲೇಖಕ ಬಸವರಾಜ ಕಟ್ಟೀಮನಿ ಅವರು ರಚಿಸಿದ್ದಾರೆ. ಲಾವಣಿಗಳಲ್ಲಿ, ಹಾಡುಗಳಲ್ಲಿ, ಕೋಲಾಟದಲ್ಲಿ, ಬಯಲು ನಾಟಕದಲ್ಲಿ ಕನ್ನಡನಾಡಿನ ಹಳ್ಳಿಗರೂ ಈ ವೀರನನ್ನು ಇಂದಿಗೂ ಸ್ಮರಿಸುತ್ತಾರೆ. ರಾಜ್ಯವನ್ನು ಮುತ್ತಿದ ಶತ್ರುಗಳನ್ನು ಸದೆಬಡಿದ. ಪರನಾರಿಯರು ತನಗೆ ತಾಯಿಯರು, ಸಹೋದರಿಯರು ಎಂದು ಪ್ರತಿಜ್ಞೆಮಾಡಿ, ಯಾವ ಶಕ್ತಿಗೂ ಬಗ್ಗದೆ ಆ ಪ್ರತಿಜ್ಞೆಯನ್ನು ಉಳಿಸಿಕೊಂಡ ಎಂದು ಕುಮಾರರಾಮನ ಕುರಿತಾಗಿ ಇಲ್ಲಿ ವಿವರಿಸಲಾಗಿದೆ. ಬಾಲ್ಯ ಜೀವನ, ಬದುಕಿನ ತಿರುವು, ಪ್ರತಿಜ್ನೆ ಸ್ವೀಕರಿಸಿದ ಪರಿ ಹೀಗೆ ಆತನ ಬದುಕಿನ ಎಲ್ಲ ಪ್ರಮುಖ ಘಟ್ಟಗಳನ್ನು ಲೇಖಕರು ಈ ಕೃತಿಯಲ್ಲಿ ವರ್ಣಿಸಿದ್ದಾರೆ.
ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ. ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...
READ MORE