`ಕೃಷ್ಣ ಚೈತನ್ಯ' ಪುರಾಣ ಪುರುಷರ ಜೀವನ ಚರಿತ್ರೆಯ ಪುಸ್ತಕವಿದು. ಲೇಖಕಿ ಎಸ್.ಜಿ. ಶ್ರೀಮತಿ ಅವರು ರಚಿಸಿದ್ದಾರೆ. ಕೃಷ್ಣ ಚೈತನ್ಯರು ಶ್ರೀ ಕೃಷ್ಣನ ಧ್ಯಾನದಿಂದ ನಿರ್ಮಲವಾದ ಪರಿಪೂರ್ಣವಾದ ಆನಂದವನ್ನು ಅನುಭವಿಸಿದರು. ಜಾತಿ ಮತಗಳ ವ್ಯತ್ಯಾಸವನ್ನು ಗಣಿಸದೇ ಶ್ರೀಮಂತರು ಬಡವರೆನ್ನದೇ ಸಾವಿರಾರು ಮಂದಿಗೆ ಮನಸ್ಸಿಗೆ ಶಾಂತಿ ಪಡೆಯುವ ದಾರಿ ತೋರಿಸಿದ ಸಂತರು. ಪಾಂಡಿತ್ಯಕ್ಕೆ ಬಹು ಮಹತ್ವ ಇದ್ದ ಕಾಲದಲ್ಲಿ ಶುದ್ಧಭಕ್ತಿ ಮುಖ್ಯ ಎಂದು ಸಾರಿದರು ಎಂದು ಕೃಷ್ಣ ಚೈತನ್ಯರು. ಅವರ ಕುರಿತಾಗಿ ಲೇಖಕರು ವಿವರಿಸಿದ್ದಾರೆ.
ಶ್ರೀಮತಿ ಎಸ್.ಜಿ ಅವರು ಮೂಲತಃ ಮೈಸೂರಿನವರು. ಬಿ.ಎಸ್ಸಿ., ಹಿಂದಿ ಪ್ರವೀಣ್ ಪದವೀಧರರು. 15-07-1950 ರಂದು ಜನಿಸಿದರು. ತಂದೆ ಎಸ್.ಕೆ. ಗುರುಡಾಚಾರ್, ತಾಯಿ- ಪದ್ಮಮ್ಮ. ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಶ್ರೀ ಕೃಷ್ಣ ಚೈತನ್ಯ (1976), ರಾಮದಾಸ (1980) ರಚಿಸಿದ್ದಾರೆ. ...
READ MORE