‘ಕ್ರಾಂತಿಯ ದಾರ್ಶನಿಕ ಭಗತ್ ಸಿಂಗ್’' ಲೇಖಕ ಕಾಶೀನಾಥ ಅಂಬಲಗೆ ಅವರ ಕೃತಿ. ದೇಶವನ್ನು, ಜನರ ಬದುಕನ್ನು ಅಪಾರವಾಗಿ ಪ್ರೀತಿಸಿದ, ಸಮಸಮಾಜದ ಕನಸು ಕಂಡ ಮನುಷ್ಯನ ಘನತೆಯನ್ನು ಸದಾ ಕಾಲವು ಗೌರವಿಸಿದ ಭಗತ್ ಸಿಂಗ್, ದೇಶ ಸ್ವಾತಂತ್ರ್ಯಕ್ಕಾಗಿ ತನ್ನ ಕೇವಲ 23 ವರ್ಷದಲ್ಲಿಗಲ್ಲಿಗೇರುತ್ತಾರೆ. ನಗುನಗುತ್ತಾ ಸುಖದೇವ, ರಾಜಗುರು ಅವರೊಡನೆ ತಮ್ಮ ಬಲಿ ಕೊಡುತ್ತಾರೆ ಎಂಬುದು ತಿಳಿದಿದ್ದೂ, ಗಲ್ಲಿಗೇರುವ ದಿವಸ ಹಗಲು-2 ಗಂಟೆಯಿಂದ 5 ಗಂಟೆಯವರೆಗೆ ಪುಸ್ತಕ ಓದುತ್ತಿದ್ದರಂತೆ. ದೇಶಪ್ರೀತಿ ಹಾಗೂ ಬಲಿದಾನದ ಈ ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ನೋಡಲು ಸಿಗುವುದಿಲ್ಲ ಅಂತ ಕ್ರಾಂತಿಕಾರಿಯ ಬದುಕಿನ ಕುರಿತು ಲೇಖಕ ಕಾಶೀನಾಥ ಅಂಬಲಗೆ ಅವರು ಅಧ್ಯಯನ ನಡೆಸಿ, ಈ ಕೃತಿಯನ್ನು ರಚಿಸಿದ್ದಾರೆ.
ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...
READ MORE