ಲೇಖಕ ಡಾ. ಲಕ್ಷ್ಮಣ ಕೌಂಟೆ ಅವರ ಐತಿಹಾಸಿಕ ಕಾದಂಬರಿ ʻಕಿತ್ತೂರು ಕದನʼ. ಪುಸ್ತಕವು ಕಿತ್ತೂರು ಸಂಸ್ಥಾನದ ಕುರಿತ ಸಮಗ್ರ ಕತೆಗಳನ್ನು ಹೇಳುತ್ತದೆ. ಇದು ಸ್ವಾತಂತ್ರ್ಯ ಹೋರಾಟದ ರೋಚಕ ಕತೆಗಳನ್ನು ನೆನಪಿಸುತ್ತವೆ. ಇತಿಹಾಸದಲ್ಲಿ ಅಚ್ಚಳಿಯದಂತೆ ಕಂಡು ಬರುವ ಹೆಸರು ಕಿತ್ತೂರು ರಾಣಿ ಚೆನ್ನಮ್ಮನದು. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ಸೈನ್ಯದ ವಿರುದ್ಧ ಕಿಂಚಿತ್ತೂ ನಡುಗದೆ ಹೋರಾಡಿದ್ದವಳು. ಈ ಕಥನವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ ಈ ಕೃತಿ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE