ಕಿರಂ ನೆನಪು-ಲೇಖಕ ಹಾಗೂ ಅನುವಾದಕ ಟಿ.ಎನ್. ವಾಸುದೇವ ಮೂರ್ತಿ ಅವರ ಕೃತಿ. ‘ಕಿ.ರಂ’ ಎಂದೇ ಖ್ಯಾತಿಯ ಪ್ರೊ.ಕಿ.ರಂ. ನಾಗರಾಜ ಅವರ ಸಾಹಿತ್ಯ ಕೃತಿಗಳು, ವಿಮರ್ಶೆಯ ವೈಖರಿ, ಸಾಹಿತ್ಯದೆಡೆಗಿನ ಅವರ ದೃಷ್ಟಿಕೋನ, ಸಾಹಿತ್ಯ ಓದಲು-ಬರೆಯಲು ಪ್ರೇರಣೆ ಇತ್ಯಾದಿ ಆಯಾಮಗಳ ಕುರಿತು ಲೇಖಕರು ಇಲ್ಲಿ ವಿವರಿಸಿದ್ದೇ ಈ ಕೃತಿ. ಕಿ.ರಂ. ಅಂದರೆ-ಕೇವಲ ಸಾಹಿತಿ ಮಾತ್ರವಲ್ಲ; ಅವರೊಬ್ಬ ಉತ್ತಮ ಗೆಳೆಯರಾಗಿಯೂ ವಯಸ್ಸಿನ ಬೇಧ ಮರೆತೂ ಎಲ್ಲರೊಡಗೂಡಿ ಬೆರೆಯುವ ವ್ಯಕ್ತಿತ್ವದ ಚಿತ್ರಣವನ್ನು ಒಳಗೊಂಡಿದೆ.
ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್ ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...
READ MORE