ಹಿರಿಯ ಲೇಖಕಿ ಡಾ. ಶಕುಂತಲಾ ದುರಗಿ ಅವರು ಕವಯಿತ್ರಿ ವಾಸಂತಿಕಾ ಬಿಕ್ಕಣ್ಣವರ ಬದುಕು- ಬರಹ ಕುರಿತು ಬರೆದ ಕೃತಿ ಇದು. ಭಕ್ತಿಪ್ರಧಾನವಾದ ವಾಸಂತಿಕಾ ಅವರ ಕಾವ್ಯವು ಶಿವ ಹಾಗೂ ಪಾರ್ವತಿಯನ್ನು ಪ್ರಾರ್ಥಿಸುವ ಪರಿಯೇ ಕಾವ್ಯದ ಆಕರ್ಷಣೆಯಾಗಿದೆ. ವ್ಯಕ್ತಿಗತ ಸಮಸ್ಯೆ ಹಾಗೂ ಸಮಾಜದ ಮೌಢ್ಯ ನಿವಾರಣೆಗೆ, ಮನುಷ್ಯ ಸಂಬಂಧಗಳ ಗಟ್ಟಿತನಕ್ಕೆ ವಾಸಂತಿಕಾ ಅವರು ಪ್ರಾರ್ಥಿಸುವ ಕಾವ್ಯಗಳು ಸಕಾರಾತ್ಮಕ ಮನೋಭಾವದ ಗುಣಗಳನ್ನು ಒಳಗೊಂಡಿವೆ. ಭಕ್ತಿಯ ನಿವೇದನೆಗಳಲ್ಲಿ ಆರೋಗ್ಯಕರ ಸಮಾಜ ನಿರ್ಮಾಣದ ಆಶಯಗಳಿವೆ. ಸ್ತ್ರೀವಾದಿ ನೆಲೆಯಲ್ಲಿಯೂ ಇವರ ಕಾವ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಸ್ತ್ರೀಶೋಷಣೆಯ ದುರಂತ ಚಿತ್ರಣ ತೆರೆದುಕೊಳ್ಳುತ್ತದೆ ಮಾತ್ರವಲ್ಲ; ಲಿಂಗ ತಾರತಮ್ಯದ ವಿರುದ್ಧದ ಅಸಮಾಧಾನವನ್ನೂ ಕಾಣಬಹುದು. ಉತ್ತರ ಕರ್ನಾಟಕದ ಪ್ರಾರಂಭದ ಲೇಖಕಿಯರಲ್ಲೇ ವಿಶಿಷ್ಟ ಸ್ಥಾನ ಪಡೆಯುವ ಅರ್ಹತೆ ಇದ್ದರೂ, ಕಳೆದ ಶತಮಾನದ ಪೂರ್ವಾರ್ಧದಲ್ಲೇ ಸತ್ವಯುತವಾದ ಕಾವ್ಯ ರಚನೆ ಮಾಡಿಯೂ ಅಜ್ಞಾನವಾಗೇ ಉಳಿದ ವಾಸಂತಿಕಾ ಅವರ ಬದುಕು-ಬರಹಗಳ ಕುರಿತು ಸ್ಥೂಲ ಪರಿಚಯ ಮಾಡಿಕೊಟ್ಟ ಲೇಖಕಿ ಶಕುಂತಲಾ ದುರಗಿ ಅವರು ಅಭಿನಂದನಾರ್ಹರು’ ಎಂದು ಖ್ಯಾತ ವಿಮರ್ಶಕಿ-ಲೇಖಕಿ ಪ್ರೊ. ವೀಣಾ ಶಾಂತೇಶ್ವರ ಅವರು ಪ್ರಶಂಸಿಸಿದ್ದಾರೆ.
ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು. ಕೃತಿಗಳು-ಪ್ರಶಸ್ತಿಗಳು: ಮಗ್ಗಲು ಮನೆ ಅತಿಥಿ ...
READ MORE