‘ಕಾರುಣ್ಯನಿಧಿ ಶ್ರೀಮಾತೆ ಶ್ರೀಶಾರದಾದೇವಿ’ ಶ್ರೀಶಾರದಾದೇವಿಯವರ ಬದುಕು ಮತ್ತು ಸೇವೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಈ ಕೃತಿಯನ್ನು ಎ.ಪಿ. ಮಾಲತಿ ಅವರು ರಚಿಸಿದ್ದಾರೆ. ಶ್ರೀಶಾರದಾದೇವಿಯವರ ವ್ಯಕ್ತಿತ್ವವೇ ಒಂದು ವಿಸ್ಮಯ ಮೇಲ್ನೋಟಕ್ಕೆ ಸಾಮಾನ್ಯ ಹೆಣ್ಣಿನಂತೆ ಕಂಡರೂ ಅಸಾಮಾನ್ಯ ಹೆಣ್ಣೆನಂತೆ ಬಾಳಿದವರು ಶಾರದಾದೇವಿ. ತಮ್ಮ ಬಳಿ ಬಂದವರ ಹೃದಯದಲ್ಲಿ ಬೆಳಕಿನ ಕಿಡಿ ಹೊತ್ತಿಸಿದವರು, ಪ್ರೀತಿ, ಕರುಣೆ, ಸಹನೆ ವಾತ್ಸಲ್ಯದ ಮೂರ್ತಿಯಾಗಿದ್ದ ಶಾರದಾ ದೇವಿಯವರು ನಿಸ್ವಾರ್ಥದಿಂದ ಜನರ ಸೇವೆ ಮಾಡಿದರು. ಕೌಟುಂಬಿಕ ಕಷ್ಟ, ಜನನಿಂದನೆ, ಅಪಮಾನ, ಅವಮಾನ, ನೋವು ವೇದನೆಯಿಂದ ಕರ್ಪೂರದಂತೆ ಉರಿದರೂ ನಿರಂತರ ತಮ್ಮ ಬಳಿ ಬಂದವರಿಗೆ ಸುಖ-ಶಾಂತಿ ದೊರೆಯುವಂತೆ ಮಾಡಿದ್ದಾರೆ. ಗ್ರಹಸ್ಥ ಜೀವನದಲ್ಲಿಯೂ ಆಧ್ಯಾತ್ಮಿಕ ಸಾಧನೆ ಮಾಡಬಹುದೆಂದು ತೋರಿದ ಆ ಮಹಾಮಾತೆಯ ಬದುಕು ಮತ್ತು ಕಾರ್ಯಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE