`ಕರ್ನಾಟಕದ ಅಂಬೇಡ್ಕರ್ ಪ್ರೊ.ಬಿ.ಕೃಷ್ಣಪ್ಪ' ಕೃತಿಯು ಮಾಳವ ನಾರಾಯಣ್ ಅವರ ಜೀವನಚಿತ್ರಣವಾಗಿದೆ. ಅಂಬೇಡ್ಕರೋತ್ತರ ಭಾರತದಲ್ಲಿ ಕರ್ನಾಟಕದ ಮಟ್ಟಿಗೆ ಅಂಬೇಡ್ಕರ್ ಅವರ ಹೋರಾಟದ ರಥವನ್ನು ಮುಂದಕ್ಕೆಳೆದ ಹೋರಾಟಗಾರರ ಸಾಲಿನಲ್ಲಿ ಪ್ರೊ.ಬಿ.ಕೃಷ್ಣಪ್ಪನವರಿಗೆ ಅಗ್ರ ಸ್ಥಾನವಿದೆ. ಪ್ರೊ.ಬಿ.ಕೆಯವರ ನಾಯಕತ್ವದಲ್ಲಿ ದಲಿತರು ಸಾಂಘಿಕವಾಗಿ ಧ್ರುವೀಕರಣಗೊಂಡು ಜಾತಿ ಮತ್ತು ಭೂಮಾಲಿಕ ಉತ್ಪಾದನಾ ರಚನೆಗಳ ವಿರುದ್ಧ ನಡೆಸಿದ ಕ್ರಾಂತಿಕಾರಿ ಸಾಮಾಜಿಕ ದಂಗೆಯ ಚಾಲತಿಕ ನೆನಪುಗಳನ್ನು ಕೃತಿಯಲ್ಲಿ ದಾಖಲಿಸಿದ್ದಾರೆ. ದಲಿತ ಚಳವಳಿಯ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಲ್ಲಿ ಒಂದು ನದಿಯಾಗಿ ಹರಿದುಬಂದ ದಲಿತ ವಿಮೋಚನಾ ಸೇನೆ ಈ ಮಹತ್ವದ ಪುಸ್ತಕವನ್ನು ಪ್ರಕಟಿಸುತ್ತಿರುವುದು ಅದರ ಸಾಂಸ್ಕೃತಿಕ ರಾಜಕಾರಣದ ದ್ಯೋತಕವಾಗಿದೆ. ಪ್ರೊ.ಬಿ.ಕೆಯವರ ಬಾಲ್ಯದ ಜೀವನ, ವೃತ್ತಿ ಜೀವನ, ದಲಿತ ಸಂಘರ್ಷ ಸಮಿತಿಯನ್ನು ರೂಪಿಸಿದ ಬಗೆ, ದಲಿತ ಚಳವಳಿಯ ಸ್ವರೂಪ, ತಾಮಸುಂದರ್ ರವರ, ಭೀಮಸೇನ ಮತ್ತು ತಿಮ್ಮರಾಯಪ್ಪನವರ ದಲಿತ ಕ್ರಿಯಾ ಸಮಿತಿ, ಬೂಸಾ ಚಳವಳಿ, ಬೀಕೆ ಸಂಘಟಿಸಿದ ಪ್ರಮುಖ ಹೋರಾಟಗಳು, ಜಾಥಾಗಳು, ದಲಿತರ ಭೂಮಿಯ ಪ್ರಶ್ನೆ ಮತ್ತು ಭೂಹೋರಾಟಗಳು, ದಸಂಸಕ್ಕೆ ರೈತ ಚಳವಳಿಯೊಂದಿಗಿದ್ದ ಭಿನ್ನಮತ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಕಲಾಮಂಡಲಿ, ಹೋರಾಟದ ಹಾಡುಗಳು, ಬೀಕೆಯವರ ಸಾಹಿತ್ಯ, ರಾಜಕೀಯ ಪ್ರವೇಶ, ಪರ್ಯಾಯ ಸಾಂಸ್ಕೃತಿಕ ರಾಜಕಾರಣದ ಚರ್ಚೆ, ದಸಂಸ ವಿಘಟನೆ ಇನ್ನೂ, ಮುಂತಾದ ಮಹತ್ವದ ವಿಷಯಗಳನ್ನು ಕುರಿತು ಮಾಳವ ನಾರಾಯಣ್ ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.
ಮಾಳವ ನಾರಾಯಣರ ಹುಟ್ಟೂರು ದೊಡ್ಡಬಳ್ಳಾಪುರ. ವಾಸ ಬೆಂಗಳೂರು. ದಲಿತ ಚಳುವಳಿಯಲ್ಲಿ ಹಲವಾರು ವರ್ಷಗಳ ಕಾಲ ದುಡಿದು ಇದೀಗ ಕರ್ನಾಟಕದ ಅಂಬೇಡ್ಕರ್ ಪ್ರೊ.ಬಿ.ಕೃಷ್ಣಪ್ಪರ ಜೀವನ ಸಾಧನೆ ಬಗ್ಗೆ ಪುಸ್ತಕ ರಚಿಸಿದ್ದಾರೆ. ಆಸಕ್ತಿ ಪುಸ್ತಕ ಓದು ಸಾಮಾಜಿಕ ಚಳುವಳಿಯಲ್ಲಿ ಭಾಗವಹಿಸುವುದು. ...
READ MORE