ವೈವಿಧ್ಯಮಯ ಬದುಕಿನ ತೃಪ್ತಿ, ಕೃತಜ್ಞತೆ, ನಾಳೆಯ ಬಗ್ಗೆ ಇನ್ನಿಲ್ಲದ ಭರವಸೆ - ಈ ಮೂರು ಸ್ತರಗಳಲ್ಲಿ ಹಿರಿಯರಾದ ನಾಗ ಐತಾಳರ ಜೀವನ ಕಥನ ಇಲ್ಲಿ ತೆರೆದುಕೊಂಡಿದೆ.
ಕಾದಂಬರಿಯೊಂದರ ಕಥಾನಕ ಭಾಗವನ್ನು ಬೇರ್ಪಡಿಸಿ ಕೇವಲ ಸ್ಥಳ, ವ್ಯಕ್ತಿ, ಶೈಕ್ಷಣಿಕ ಸ್ಥಿತಿಗತಿ, ಮನೆತನ, ಇತ್ಯಾದಿ ಭಾವಶೀಲತೆಯಿಂದ ವಿವರಣಾತ್ಮಕ ಮತ್ತು ವಿಮರ್ಶೆಯ ಶೈಲಿಯಲ್ಲಿ ಉಲ್ಲೇಖವಾದಂತೆ ಇರುವ ಕೃತಿ ಇದಾಗಿದೆ. ಜೀವನ ಪಾರದರ್ಶಕತೆ, ಸಮಕಾಲೀನ ಭಾರತ ಕುರಿತ ವಿವಿಧ ಆಯಾಮಗಳು ಓದುಗರನ್ನು ತಟ್ಟುತ್ತವೆ.
ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ. ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ...
READ MORE