ಲೇಖಕ ವಿ.ಎಸ್.ಆರ್. ಅವರು ಸಂಪಾದಿಸಿದ ಕೃತಿ-ಕೆ.ಸಿ. ರೆಡ್ಡಿ (ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ). ಅವರ ಜೀವನದ (1947-1952) ಕಿರುಪರಿಚಯ ಕೃತಿಯಲ್ಲಿದೆ. ಇವರು (ಸ್ವಾತಂತ್ಯ್ರೋತ್ತರ ಕರ್ನಾಟಕ ರಾಜ್ಯ) ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳು. ಬೆಂಗಳೂರಿನ ವಿಧಾನಸೌಧದ ಮೊದಲ ನಿರ್ಮಾಣಕಾರರು.
ಕೋಲಾರ ಜಿಲ್ಲಾಬೋರ್ಡ್ ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದ ಕೆ.ಸಿ. ರೆಡ್ಡಿ ಅವರು, ಬ್ರಾಹ್ಮಣೇತರ ಚಳವಳಿಯ ರಾಜಕೀಯ ಮುಖವಾಣಿ ’ಪ್ರಜಾಪ್ರತಿನಿಧಿ ಸಭೆ’ಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದರು. ಗಾಂಧೀಜಿಯವರ ಹರಿಜನೋದ್ಧಾರ ಚಳವಳಿಯಲ್ಲಿಯೂ ಭಾಗವಹಿಸಿದ್ದರು. ಕೆ.ಸಿ. ರೆಡ್ಡಿ ಅವರಿಗೆ ಸಂಬಂಧಿಸಿದ ಕೆಲ ಮಹತ್ವದ ಸಂಗತಿಗಳನ್ನು ತೋರುವ ಕೃತಿ ಇದು.
ಸ್ವಾತಂತ್ಯ್ರೋತ್ತರ ಕರ್ನಾಟಕದ ಅಂದರೆ ಅಂದಿನ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿ ಅವರ ಜೀವನ ಸಾಧನೆ ಕುರಿತು ಲೇಖಕ ವಿ.ಎಸ್. ಆರ್. ಅವರು ಕಿರು ಪರಿಚಯ ಮಾಡಿದ್ದಾರೆ. ...
READ MORE