’ಜ್ಯೋತಿಬಸು ಅಧಿಕೃತ ಜೀವನಚರಿತ್ರೆ’ ಆರ್ . ಕೆ. ಹುಡಗಿ (ರಾಹು) ಅವರ ಅನುವಾದಿತ ಕೃತಿ. ಕೃತಿಗೆ ಬೆನ್ನುಡಿ ಬರೆದಿರುವ ಬರಗೂರು ರಾಮಚಂದ್ರಪ್ಪ ಅವರು, ಜ್ಯೋತಿ ಬಸು ಅವರು ನಮ್ಮ ದೇಶದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿಶಿಷ್ಟ ವ್ಯಕ್ತಿತ್ವವಾಗಿ ಬೆಳೆದು ನಿಂತವರು. ಬಸು ಅವರ ಪ್ರಬುದ್ಧ ಬೆಳವಣಿಗೆಯನ್ನು ಈ ಪುಸ್ತಕವು ನಿರೂಪಿಸುತ್ತದೆ. ಇಲ್ಲಿ ಜ್ಯೋತಿ ಬಸು ಅವರ ಬೆಳವಣಿಗೆಯಷ್ಟೇ ಇಲ್ಲ; ಭಾರತದ ಕಮ್ಯುನಿಸ್ಟ್ ಚಳವಳಿಯ ಬೆಳವಣಿಗೆಯೂ ಹಿನ್ನೆಲೆಯಲ್ಲಿ ಹರಿಯುತ್ತದೆ. ಈ ಹರಿವಿನ ಮೇಲೆ ಜ್ಯೋತಿಬಸು ಅವರ ಹಾಯಿದೋಣಿ ಸಾಗುತ್ತದೆ. ಜೀವನಚರಿತ್ರೆಯು ಸಂಬಂಧಪಟ್ಟ ವ್ಯಕ್ತಿಯ ಜೀವನ ಮತ್ತು ಆ ಕಾಲದ ಚರಿತ್ರೆ ಎರಡನ್ನೂ ಒಳಗೊಂಡಿದೆ. ಈ ಪುಸ್ತಕದ ಓದಿನಿಂದ ವ್ಯಕ್ತಿಗತವೊಂದರ ಪ್ರಬುದ್ಧ ಪರಿಚಯದ ಜೊತೆಗೆ ಅರ್ಥಪೂರ್ಣ ಸಂವಾದವೊಂದು ಸಾಧ್ಯವಾಗುತ್ತದೆ. ಇದು ಎಲ್ಲ ಎಡಪಂಥೀಯ ಹಾಗೂ ಪ್ರಗತಿಪರ ವಿಚಾರಧಾರೆಯವರು ಅನುಸಂಧಾನಿಸಲು ಯೋಗ್ಯವಾದ ಕೃತಿಯಾಗಿದೆ’ ಎಂದು ಪ್ರಶಂಸಿಸಿದ್ದಾರೆ..
ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು . ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ...
READ MORE