ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರು ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರ ಜೀವನ ಚರಿತ್ರೆ ಹಾಗೂ ಬರಹ-ಚಿಂತನೆಗಳ ಸಾಧನೆ ಕುರಿತು ಬರೆದ ಕೃತಿ-ಜಿಡ್ಡು ಕೃಷ್ಣಮೂರ್ತಿ. ಆಧುನಿಕ ಭಾರತದ ತತ್ವಜ್ಞಾನಿಗಳ ಪೈಕಿ ಜಿಡ್ಡು ಕೃಷ್ಣಮೂರ್ತಿಯು ಪ್ರಮುಖರು. ಜೀವನ ಸ್ವೀಕರಿಸುವ, ಅದರ ನಿರ್ಲಿಪ್ರತೆಯನ್ನು ಹಾಗೂ ಕ್ಷಣಭಂಗುರತೆಯನ್ನು, ಸೌಂದರ್ಯವನ್ನೂ ಸಹ ಬೋಧಿಸಿದ ಚಿಂತಕ. ತಮ್ಮ ಬೋಧನೆಗಳ ಮೂಲಕವೇ ಅಸಂಖ್ಯ ಶಿಷ್ಯರನ್ನು ಹೊಂದಿದ್ದರ ಕುರಿತು ಈ ಕೃತಿ ಮಾಹಿತಿ ನೀಡುತ್ತದೆ.
ಲೇಖಕ ಸಂತೋಷ್ ಅನಂತಪುರ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದವರು. ಕೇರಳ ರಾಜ್ಯದಲ್ಲೇ ಪದವಿಪೂರ್ವ ಶಿಕ್ಷಣ ಪೂರೈಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಹಾಗೂ ಮಂಗಳೂರು ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾ ಸಂಸ್ಥೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಸದ್ಯ, ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ-ಕವನ - ಲೇಖನಗಳು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜಿಡ್ಡು ಕೃಷ್ಣಮೂರ್ತಿ ಅವರ ಒಂದು ಆಂಗ್ಲ ಕೃತಿ ಹಾಗೂ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಕಾಗೆ ...
READ MORE