‘ಜೀವನ ಪಥ ನೆನಪಿನ ರಥ’ ಜಿ.ಎಸ್. ಹೆಗಡೆ ಅವರ ಜೀವನಾಧಾರಿತ ಕೃತಿಯಾಗಿದೆ. ಈ ಪುಸ್ತಕ ವಿಶೇಷತೆಯೆಂದರೆ ಪ್ರತಿ ಲೇಖನಗಳು ವ್ಯಕ್ತಿಗೆ ಪ್ರಮುಖವೆನ್ನಿಸುತ್ತದೆ. ಅಷ್ಟೇ ಅಲ್ಲದೆ ದಕ್ಷಿಣ ಕನ್ನಡದಲ್ಲಿ ಉತ್ತರಾದಿ ಸಂಗೀತವನ್ನು ಪಸರಿಸಿದ ಸಾರಸ್ವತ ಬ್ರಾಹ್ಮಣರ ಎಪ್ಪತ್ತು ವರ್ಷಗಳ ಹಿಂದಿನ ಅಪರೂಪದ ಪಟಗಳನ್ನು ಕಾಣಬಹುದು.
ಯಕ್ಷಗಾನ ಕಲಾವಿದರು, ಬರಹಗಾರರಾದ ಜಿ.ಎಸ್. ಹೆಗಡೆ ಅವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದವರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದವರು. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಕಾಸರಗೋಡುಸೇರಿದಂತೆ ಹಲವು ಪ್ರದೇಶಗಳ ಕಲಾವಿದರನ್ನು ಸಂಪರ್ಕಿಸಿ ಯಕ್ಷಗಾನ ಹಸ್ತಮುದ್ರಿಕೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದವರು. ಯಕ್ಷಗಾನದಲ್ಲಿ ಸಂಸ್ಕೃತದ ಪ್ರಭಾವದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದರು. ಯಕ್ಷಗಾನ ಹಸ್ತಮುದ್ರಿಕೆ ಇವರು ರಚಿಸಿದ ಕೃತಿಯಾಗಿದೆ. ...
READ MORE