ಖ್ಯಾತ ಸಾಹಿತಿ ಡಿ.ಎಸ್. ನಾಗಭೂಷಣ ಅವರು ರಚಿಸಿದ ಕೃತಿ-ಜಯಪ್ರಕಾಶ ನಾರಾಯಣ: ಒಂದು ಅಪೂರ್ಣ ಕ್ರಾಂತಿಯ ಕಥೆ. ಭಾರತಕ್ಕೆ ಸ್ವಾತಂತ್ಯ್ರ ದೊರೆತ ನಂತರದ ಅಂದರೆ ಮಹಾತ್ಮಗಾಂಧೀಜಿ ಇಲ್ಲದ ಸಂದರ್ಭದಲ್ಲಿ ಅವರ ಸ್ಥಾನ -ಗೌರವವನ್ನು ಕಾಯ್ದುಕೊಂಡ ಧುರೀಣರ ಪೈಕಿ ಜಯಪ್ರಕಾಶ ನಾರಾಯಣ ಸಹ ಒಬ್ಬರು. ಇವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದೇ ಕರೆಯಲಾಗುತ್ತದೆ. ಸಮಾಜವಾದಿಯಾಗಿ ಸುಧಾರಣೆಗಳನ್ನು ತರಲು ಪ್ರಯತ್ನಿಸಿದವರಲ್ಲಿ ಪ್ರಮುಖರು. ಆದರೂ, ಜಯಪ್ರಕಾಶ ನಾರಾಯಣರು ಖ್ಯಾತಿಯಿಂದ ದೂರವೇ ಉಳಿದರು. ಸಮಾಜ ಸುಧಾರಣಾ ವಾದದ ಅವರ ಕನಸು ಪೂರ್ಣವಾಗಲೇ ಇಲ್ಲ. ಇಂತಹ ಕೆಲ ಸಂಗತಿಗಳ ಕುರಿತು ವಿವರಗಳನ್ನು ಒಳಗೊಂಡಿರುವ ಕೃತಿ ಇದು.
ಕೃತಿಯ ಪರಿವಿಡಿಯಲ್ಲಿ ಬಿಹಾರದ ಬಾಲಕ: ಗಾಂಧಿ ದರ್ಶನ, ಅಮೆರಿಕಾದಲ್ಲಿ ಶಿಕ್ಷಣ: ಕಮ್ಯೂಣಿಸಂ ಒಲವು, ಗಾಂಧಿ ಸನಿಹದಲ್ಲಿ: ಜನಶಕ್ತಿಯ ಮಧ್ಯೆ, ಹೋರಾಟದ ಅಗ್ನಿದಿವ್ಯ: ರಾಷ್ಟ್ರದ ಕಣ್ಮಣಿ, ಜನತಾ ಸರ್ಕಾರ: ಅಪೂರ್ಣ ಕ್ರಾಂತಿ ಎಂಬ ಶೀರ್ಷಿಕೆಗಳ ಬರಹಗಳಿವೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE