‘ಜಯಪ್ರಕಾಶ್ ನಾರಾಯಣ’ ಡಿ.ಎಸ್.ನಾಗಭೂಷಣ ಅವರ ಅಪೂರ್ಣ ಕ್ರಾಂತಿಯ ಕಥೆಯಾಗಿದೆ. ಎಪ್ಪತ್ತರ ದಶಕದಲ್ಲಿ ಸಂಪೂರ್ಣ ಕ್ರಾಂತಿಯ ನಿಲುವಿನೊ೦ದಿಗೆ ನಡೆದ ರಾಜಕೀಯ ಹೋರಾಟಕ್ಕೆ ಪ್ರಮುಖ ಪ್ರೇರಕಶಕ್ತಿ ಜಯಪ್ರಕಾಶ್ ನಾರಾಯಣ್. ಅನೇಕ ದೌರ್ಬಲ್ಯಗಳು ಇಣುಕಿದ್ದರಿಂದ ಅಪೂರ್ಣವಾಗಿ ಉಳಿದ ಅವರ ಹೋರಾಟದ ಮತ್ತು ಬದುಕಿನ ಚಿತ್ರಣ ಈ ಕೃತಿಯಲ್ಲಿ ಸಿಗುತ್ತದೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MOREಹೊಸತು- ಡಿಸೆಂಬರ್ -2003
ಎಪ್ಪತ್ತರ ದಶಕದಲ್ಲಿ ಸಂಪೂರ್ಣ ಕ್ರಾಂತಿಯ ನಿಲುವಿನೊ೦ದಿಗೆ ನಡೆದ ರಾಜಕೀಯ ಹೋರಾಟಕ್ಕೆ ಪ್ರಮುಖ ಪ್ರೇರಕಶಕ್ತಿ ಜಯಪ್ರಕಾಶ್ ನಾರಾಯಣ್. ಅನೇಕ ದೌರ್ಬಲ್ಯಗಳು ಇಣುಕಿದ್ದರಿಂದ ಅಪೂರ್ಣವಾಗಿ ಉಳಿದ ಅವರ ಹೋರಾಟದ ಮತ್ತು ಬದುಕಿನ ಚಿತ್ರಣ ಈ ಕೃತಿಯಲ್ಲಿ ಸಿಗುತ್ತದೆ. ಇಂಥ ಹೋರಾಟವನ್ನು ದಮನಿಸಲು ತುರ್ತು ಪರಿಸ್ಥಿತಿಯಂಥ ಕರಾಳ ಅಸ್ತ್ರ ನಿಜವಾಗಿಯೂ ಅಗತ್ಯವಾಗಿತ್ತೆ? 'ಪ್ರಿಯ ಇಂದಿರಾಜಿ, ದಯವಿಟ್ಟು ನಿಮ್ಮನ್ನು ದೇಶದೊಂದಿಗೆ ಗುರುತಿಸಿಕೊಳ್ಳಬೇಡಿ. ನೀವು ಅಮರರಲ್ಲ; ಆದರೆ ಭಾರತ ಅಮರ." ಸೆರೆ ಮನೆಯಿಂದ ಜೆ. ಪಿ. ಇಂದಿರಾ ಗಾಂಧಿಗೆ ಬರೆದ ಪತ್ರದಿಂದ ಇದು ಒಂದು ಸಾಲು ಅಷ್ಟೆ!.