ಪ್ರೊ. ಜಗನ್ನಾಥ ಕಮಲಾಪುರೆ ಅವರು ಬರೆದ ಜಾನಪದ ವಿದ್ವಾಂಸ ಡಾ. ರಾಜೇಂದ್ರ ಯರನಾಳೆ ಎಂಬ ಪುಸ್ತಕವು ಡಾ. ರಾಜೇಂದ್ರ ಯರನಾಳೆಯವರ ಬದುಕು ಬರಹವನ್ನು ಕೇಂದ್ರಿಕರಿಸಿ ಬರೆಯಲಾಗಿದೆ. ಒಟ್ಟು ನಾಲ್ಕು ಭಾಗಗಳನ್ನು ಹೊಂದಿದ್ದು ಮೊದಲ ಭಾಗವು ಅವರ ಬಗ್ಗೆ ಬಂದ ಕವಿತೆಗಳಿದ್ದು, ಭಾಗ ಎರಡರಲ್ಲಿ ಬಾಲ್ಯ, ಶಿಕ್ಚಣ, ವೃತ್ತಿ ಜೀವನದ ಮೇಲೆ ಬೆಳಕು ಚೆಲ್ಲಿದ್ದರೆ. ಭಾಗ -3ರಲ್ಲಿ ಯರನಾಳೆ ಅವರ ಒಟ್ಟು ಸಾಹಿತ್ಯ ಕೃಷಿ ಬಗ್ಗೆ ವಿಶ್ಲೇಷಣೆ ಮಾಡಲಾಗಿದ್ದು ಜೊತೆಗೆ ಅವರು ಸ್ಥಾಪಿಸಿರುವ ಸಾಂಸ್ಕೃತಿಕ ಲೋಕ, ಹೊಂದಿರುವ ದೇಶಿ ವಸ್ತು ಸಂಗ್ರಹ, ಶಿಲ್ಪ ವೈಭವ, ಅರಣ್ಯ ಹಾಗೂ ಕೃಷಿ ಸಂಬಂಧಿತ ವಿವರಗಳು ದಾಖಲಿಸಲಾಗಿದೆ. ಭಾಗ ನಾಲ್ಕರಲ್ಲಿ ಸ್ವತಃ ಡಾ. ರಾಜೇಂದ್ರ ಯರನಾಳೆ ಅವರ ಆತ್ಮವೃತ್ತಾಂತವಿದೆ.
ಜಗನ್ನಾಥ ಕಮಲಾಪುರೆಯವರು ಎಂ.ಎ, ಎಂ.ಎಡ್. ಎಂ.ಫಿಲ್ ಹಾಗೂ ಪಿ.ಜಿ.ಡಿ.ಎಚ್.ಇ ಪದವಿಧರರು. ವೃತ್ತಿಯಿಂದ ಉಪನ್ಯಾಸಕರಾಗಿದ್ದು ಪ್ರವೃತ್ತಿಯಿಂದ ಸಾಹಿತಿ ಹಾಗೂ ರಂಗ ಕಲಾವಿದರು. ಅಕ್ಷರ ಕಾರಂಜಿ ಪ್ರಾತಿನಿಧಿಕ ಕವನ ಸಂಕಲನ ಸಂಪಾದಕರಾಗಿದ್ದು, ಜಾನಪದ ವಿದ್ವಾಂಸ ಡಾ. ರಾಜೇಂದ್ರ ಯರನಾಳೆ ಅವರ ಮೊದಲ ಕೃತಿಯಾಗಿದ್ದು ಸಾಂದರ್ಭಿಕವಾಗಿ ಅನೇಕ ಲೇಖನಗಳು ಪ್ರಕಟವಾಗಿವೆ. ಹಲವಾರು ವಿಚಾರ ಸಂಕಿರ್ಣಗಳಲ್ಲಿ ಪ್ರಬಂಧ ಮಂಡಿಸಿದ್ದು ಅನೇಕ ಸಾಹಿತ್ಯ ಸಮ್ಮೇಳನಗಳÀಲ್ಲಿ ಸಹಭಾಗಿತ್ವ ಪಡೆದಿದ್ದಾರೆ. ವಿದ್ಯಾರ್ಥಿ ದೆಶೆಯಿಂದಲೆ ರಂಗಾಸಕ್ತಿ ಇದ್ದ ಕಾರಣ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸಧ್ಯ ಬೀದರನ ಕರ್ನಾಟಕ ಶಿಕ್ಷಣ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...
READ MORE