ಹೊಸಕೊಪ್ಪ ಕೃಷ್ಣರಾವ್

Author : ಎಂ.ಎಂ.ಪ್ರಭಾಕರ ಕಾರಂತ

Pages 185

₹ 60.00




Year of Publication: 1999
Published by: ತಾಲೂಕು ಪತ್ರಕರ್ತರ ಸಂಘ
Address: ಕೊಪ್ಪ- 577126

Synopsys

‘ಹೊಸಕೊಪ್ಪ ಕೃಷ್ಣರಾವ್’ ಎಂ.ಎಂ. ಪ್ರಭಾಕರ ಕಾರಂತ್ ಅವರು ಸಂಪಾದಿಸಿರುವ ನೆನಪಿನ ಗ್ರಂಥಮಾಲೆ. ಕೃಷ್ಣರಾಯರು ಪ್ರಜಾ ಪ್ರತಿನಿಧಿ ಸಭೆ ಹಾಗೂ ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿ ಪ್ರಭಾವಶಾಲಿಯಾಗಿದ್ದರು, ಆಗಿನ ಸರ್ಕಾರವನ್ನು ಸುಧಾರಣೆಗಾಗಿ ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಕಡೂರು ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಕೃಷ್ಣರಾವ್ ಅವರು ಅತ್ಯುತ್ತಮ ಆಡಳಿತ ನಡೆಸಿದರು. ಅವರ ಬದುಕಿನ ಕುರಿತು ಬೆಳಕು ಚೆಲ್ಲುವ ಕೃತಿ ಇದು.

About the Author

ಎಂ.ಎಂ.ಪ್ರಭಾಕರ ಕಾರಂತ

ಪ್ರಭಾಕರ ಕಾರಂತರು ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತರಾಗಿ, ಸಹೃದಯೀ ಸಾಹಿತ್ಯ ಪ್ರೇಮಿಯಾಗಿ ಬೆಳೆದವರು. ಪಲ್ಲಟಗೊಂಡ ಬದುಕು, ಆಗಿನ ತುಮುಲಗಳು, ಜೊತೆಗೆ ಅವರ ಬಹುಮುಖಿ ಚಟುವಟಿಕೆಗಳು ಅವರ ಅನುಭವದ ಹರವನ್ನು, ಆಳವನ್ನು ಹೆಚ್ಚಿಸಿದೆ. ಹೊಸಕೊಪ್ಪದಂತ ಪುಟ್ಟ ಹಳ್ಳಿಯಲಲ್ಲಿ ಜನಿಸಿದ ಅವರು ಹಿಡಿದು ಕಗ್ಗಾಡಿನ ನಡುವಿನ ಗೀರ್ಲುವಿನ ಹಳ್ಳಿಗನೊಬ್ಬನಾಗಿ ಬಾಳಿದರು. ಎಲ್ಲರ ಬಳಿಯೂ ಯಾವುದೇ ಅಹಂಕಾರ ಅಥವಾ ಕೀಳರಿಮೆಗಳಿಲ್ಲದೇ ಒಡನಾಡಿದ್ದಾರೆ. ಅವರ ಬದುಕಿನಲ್ಲಿನ ಪ್ರಾಮಾಣಿಕತೆ, ಉತ್ತಮ ಸಾಮಾಜಿಕ ಬದುಕಿನ ಬಗ್ಗೆ ಅವರಿಗಿರುವ ತೀವ್ರ ಕಳಕಳಿ, ನಿಷ್ಠೆಗಳು ಅವರ ಬರಹಗಳಲ್ಲೂ ಸಹಜವಾಗಿ ಬಂದಿದೆ. ’ಶೀರ್ನಾಳಿ, ಬೇರು ಪ್ರೀತಿ, ವಿಮರ್ಶಕರ ಅಧ್ವಾನಗಳು’ ಅವರ ಕೃತಿಗಳು.  ...

READ MORE

Related Books