ಲೇಖಕ ಸುಭಾಶ್ಚಂದ್ರ ಶೆಟ್ಟಿ, ಬಾಚನಾಳ ಅವರು ಬರೆದ ಜೀವನ ಚರಿತ್ರೆ -ಕವಿ ಹೆಬ್ಬಾಳದ ದಿ.ಗುರುಪಾದಪ್ಪ ಚೇಗಟಿ. ಅವರು ಬಾಳಿದ ಹೆಬ್ಬಾಳದ ಪರಿಸರ, ಅವರ ಶಿಕ್ಷಕ ವೃತ್ತಿ, ಸಾಹಿತ್ಯ ರಚನೆ ಹಾಗೂ ಧೋರಣೆ ಇತ್ಯಾದಿ ಸಂಪಾದಿಸಿದ್ದ ಕೃತಿ ಇದು. ಕಲಬುರಗಿಯ ಗಂಜ್ ಪ್ರದೇಶದಲ್ಲಿ ‘ಗುಣ ಲೋಪ’ ಡಪ್ಪಿನಾಟ ಪ್ರದರ್ಶನ ಮಾಡಿಸಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನ 2 ಸಾವಿರ ರೂ. ಬಹುಮಾನ ಪಡೆದಿದ್ದರು. ಅಣ ವೀರಭದ್ರೇಶ್ವರನ ಪರಮಭಕ್ತರೂ ಆಗಿದ್ದ ಗುರುಪಾದಪ್ಪ, ಮಕ್ಕಳಿಗೆ ಪಾಠ ಹೇಳುತ್ತಾ, ನೀತಿ -ತತ್ವ ಪದಗಳನ್ನು ರಚಿಸಿ, ಸಮಾಜದ ಡೊಂಕನ್ನು ತೆರೆದು ತೋರುತ್ತಿದ್ದರು. ಸಿದ್ದರಾಮ ಇವರ ಕಾವ್ಯನಾಮ. ವಚನ ಮತ್ತು ಅನುಭವದ ಹಾಡುಗಳನ್ನು ರಚಿಸಿ ಹಾಡಿದರು. ಜನಪದ ಡಪ್ಪಿನಾಟ ಬರೆದು ಆಡಿಸಿದರು. ವೃತ್ತಿಯಲ್ಲಿ ಶಿಕ್ಷಕರಿದ್ದು, ಸಾಹಿತ್ಯ ಪ್ರೇಮಿಯಾಗಿ ಕಲೆ-ಕಲಾವಿದರನ್ನು ಪ್ರೋತ್ಸಾಹಿಸಿದ್ದರು.
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು. ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...
READ MORE