‘ಹಸ್ತಪ್ರತಿ ಶಾಸ್ತ್ರಜ್ಞ’ ಸಾಹಿತಿ ವಿದ್ವಾಂಸರ ಕಿರುಪುಸ್ತಕ ಮಾಲೆ-1 ನಲ್ಲಿ ಪ್ರಕಟವಾದ ಕೃತಿಯನ್ನು ಬಿ.ಎಸ್. ಸ್ವಾಮಿ ಅವರು ರಚಿಸಿದ್ದಾರೆ. ಶಿವಣ್ಣನವರು ಪ್ರಸಿದ್ಧ ವಿದ್ವಾಂಸರು ಅವರು ಹಸ್ತಪ್ರತಿ ಕ್ಷೇತ್ರದಲ್ಲಿ ಮಾಡಿದ ಮಹತ್ವದ ಸಾಧನೆಗಳ ಬಗ್ಗೆ ಲೇಖಕ ಸ್ವಾಮಿಯವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಉದಯೋನ್ಮುಖ ಸಂಶೋಧಕರಿಗೂ, ಆಸಕ್ತ ಕನ್ನಡ ಓದುಗರಿಗೂ ಉಪಯೋಗವಾಗಲಿದೆ.
ಕಥೆ, ಕಾದಂಬರಿ, ಕವನ, ನಾಟಕ, ಪ್ರಬಂಧ-ಹೀಗೆ ವೈವಿಧ್ಯಮಯ ಬರೆಹ ವ್ಯವಸಾಯದಿಂದ ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿರುವ ಬಿ. ಸಿದ್ಧಲಿಂಗಸ್ವಾಮಿ (ಬಿ.ಎಸ್.ಸ್ವಾಮಿ) ಅವರು ಹುಟ್ಟಿದ್ದು 1942ರ ಸೆಪ್ಟಂಬರ್ 8 ರಂದು. ಊರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನ ಹಳ್ಳಿ. ತಂದೆ ವಿ. ಬಸವಲಿಂಗಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು, ತಾಯಿ ಶಿವನಾಗಮ್ಮ. ಪ್ರಾರಂಭಿಕ ಶಿಕ್ಷಣ ಮಧುವನಹಳ್ಳಿ, ಕೊಳ್ಳೇಗಾಲ. ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಮೈಸೂರು, ಚಾಮರಾಜನಗರ ಸುತ್ತಮುತ್ತಲ ಕಡೆಗಳಲ್ಲಿ ಹಬ್ಬಿರುವ ಪವಾಡ ಸದೃಶ ವಿಚಾರಗಳು, ಐತಿಹ್ಯ, ಜನರ ನಂಬಿಕೆ, ...
READ MORE