ಹಳ್ಳಿಯ ಮಹಾತ್ಮ ಎಂಬ ಪುಸ್ತಕವು ಲಿಂಗಣ್ಣ ಸಿಂಪಿ ಅವರ ಕೃತಿಯಾಗಿದೆ. ಈ ಕೃತಿಯು ಹತ್ತರಕ್ಕಿ ರೇವಣ ಸಿದ್ದಪ್ಪ ಮಾಸ್ತರ ಜೀವನ ಕುರಿತು ಬರೆದ ಪುಸ್ತಕವಾಗಿದೆ. ದೊಡ್ಡವರು ಇಂಥ ದೇಶದಲ್ಲಿಯೇ ಹುಟ್ಟಿ ಬರಬೇಕೆಂಬ ನಿಯಮವಿಲ್ಲ: ಅದಕ್ಕೆ ಶ್ರೀಮಂತಿಕೆ-ಬಡತನಗಳ ಕಾರಣವಿಲ್ಲ; ಹಳ್ಳಿ ಪಟ್ಟಣಗಳ ಭೇದವಿಲ್ಲ; ಜಾತಿ ಪಂಗಡಗಳ ತಾರತಮ್ಯವಿಲ್ಲ; ಕಲಿತವರು ಕಲಿಯದವರು ಎಂಬ ಲೆಕ್ಕವಿಲ್ಲ, ದೇವನು ಮಾನವನಾಗಿ ಇಳಿಯದೆ ಮಾನವನೇ ದೇವನಾಗಿ ಏರಬೇಕಾಗಿರುವದರಿಂದ ವಂಶ ಸ್ಥಳ-ಕಾಲ ಇವು ಮಾನವನನ್ನು ರೂಪಿಸುತ್ತಿರುತ್ತವೆಂಬ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂಬುದನ್ನು ಈ ಪುಸ್ತಕ ವಿವರಿಸುತ್ತದೆ.
ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. 1922ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ...
READ MORE