ಹಾಡು ಹಿಡಿದ ಜಾಡು

Author : ನಾ. ದಾಮೋದರ ಶೆಟ್ಟಿ

Pages 332

₹ 375.00




Year of Publication: 2022
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ಹಾಡು ಹಿಡಿದ ಜಾಡು ಕೃತಿಯು ವೈ.ಕೆ.ಮುದ್ದುಕೃಷ್ಣ ಅವರ ಆತ್ಮಕಥನವಾಗಿದ್ದು. ಡಾ.ನಾ. ದಾಮೋದರ ಶೆಟ್ಟಿ ಅವರು ಕೃತಿಯನ್ನು ರಚಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ವೈ.ಕೆ.ಮುದ್ದುಕೃಷ್ಣ (ವೈ. ಕೆ.ಎಂ) ಅವರ ಆತ್ಮಚರಿತ್ರೆ ಈ ಕೃತಿಯು,ಸ್ವಂತ ಜೀವನದ ಕಥನವಾಗಿದೆ. ಹಾಗೂ ಅವರ ಜೊತೆ ಒಡನಾಡಿದವರ ಮಾತುಗಳೂ ಕೂಡಿರುವುದು ವಿಶೇಷ. ಜೊತೆಗೆ ವೈ.ಕೆ.ಎಂ ಅವರ 75ನೇ ಜನ್ಮದಿನದ ಸಂದರ್ಭದಲ್ಲೇ ಇದು ಹೊರಬಂದಿದೆ ಎಂಬುದು ಮತ್ತೂಂದು ವಿಶೇಷವಾಗಿದೆ. ವೈ.ಕೆ.ಮುದ್ದುಕೃಷ್ಣ ಜೀವನಗಾಥೆಯ ಘಟನಾವಳಿಗಳ ಕುರಿತಂತೆ ಇದೊಂದು ಚರಿತ್ರಾರ್ಹ ದಾಖಲಾತಿ ಎಂಬುದು ನನ್ನ ಭಾವನೆ ಸಾರ್ವಜನಿಕ ಸೊತ್ತಾಗಿದ್ದ ಮುದ್ದುಕೃಷ್ಣ ಅವರು ಸಂಸಾರಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಿದವರು, ಆದರೆ ಸಾರ್ವಜನಿಕಕ್ಕಿರುವ ತಾಕತ್ತು ಬೃಹತ್ತಾದಾಗಲಷ್ಟೇ ದಾಖಲಾತಿಗೆ ಮಹತ್ವ ಒದಗುವುದು. ದೃಷ್ಟಿಯಲ್ಲಿ ಮುದ್ದುಕೃಷ್ಣ ಅವರ ಬದುಕು ಸಾರ್ವಜನಿಕ ಕ್ಷೇತ್ರದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಬೇಕಾದ ಅನಿವಾರ್ಯತೆಯಿದೆ. ಮುಂದಿನ ಪೀಳಿಗೆ ಅರಿತು, ಅನುಭವಿಸಿ, ವರ್ತಿಸಬೇಕಾದ ಅನೇಕ ಎಷಯಗಳನ್ನು "ಹಾಡು ಹಿಡಿದ ಜಾಡು” ಹೊಂದಿದೆ ಎಂಬುದನ್ನು ಕಂಡುಕೊಂಡು ಶಮನಂದಿಬೆಟ್ಟ ಹಾಗೂ ನಾನು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಮುದ್ದುಕೃಷ್ಣ ಅವರ ಪರಿವಾರ ಬೃಹತ್ತಾದುದು. ಅವರ ಕುರಿತು ಹಿತೈಷಿಗಳು, ಅಭಿಮಾನಿಗಳು ಆಡುವ ಮಾತು, ನೀಡುವ ಪ್ರತಿಕ್ರಿಯೆ ಅನ್ಯಾದೃಶವಾದುದು. - ಅವರಲ್ಲಿ ಕೆಲವರ ಅಭಿಪ್ರಾಯಗಳನ್ನೂ ಪ್ರತಿಕ್ರಿಯೆಗಳನ್ನೂ ಇಲ್ಲಿ ಕೂಡಿಸಿಕೊಂಡಿದ್ದೇವೆ. ಮುದ್ದುಕೃಷ್ಣ ಅವರ “ಹಾಡೆಂಬ ಎಪ್ಪತೈದು ಬಸಂತಗಳ ಜಾಡಿಗೆ ಇವು ಪೂರಕ ಬೆಸುಗೆಗಳಾಗುವವು ಎಂಬುದು ನಮ್ಮ ವಿಶ್ವಾಸ. ಅಷ್ಟೊಂದು ವರ್ಣಮಯ ಬದುಕನ್ನು ವೈ.ಕೆ.ಎಂ ಅವರು “ನೋಡಿ ಕಂಡ‌” ಎಂಬುದು “ಹಾಡು ಹಿಡಿದ ಜಾಡು” ಅನ್ನು ಓದುವಾಗ ನೀವೇ ಕಾಣುವಿರಿ ಎಂದು ಪುಸ್ತಕದ ಬೆನ್ನುಡಿಯಲ್ಲಿ  ಲೇಖಕ ನಾ.ದಾಮೋದರ ಶೆಟ್ಟಿ ತಿಳಿಸಿದ್ದಾರೆ.

About the Author

ನಾ. ದಾಮೋದರ ಶೆಟ್ಟಿ
(02 August 1951)

ನಟ, ನಾಟಕಕಾರ, ಸಾಹಿತಿ ನಾ. ದಾಮೋದರ ಶೆಟ್ಟಿ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1975ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 36 ವರ್ಷಗಳ ದೀರ್ಘಸೇವೆಯ ನಂತರ 2011ರಲ್ಲಿ ನಿವೃತ್ತಿಯಾಗಿದ್ದಾರೆ.  ಚಿಕ್ಕಂದಿನಿಂದಲೇ ನಾಟಕ, ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕೇರಳದ ತ್ರಿಶೂರಿನ ಸ್ಕೂಲ್‌ ಆಫ್‌ ...

READ MORE

Related Books