ಗೋರೇಬಾಳ ಹನುಮಂತರಾವ್

Author : ಸ್ವಾಮಿರಾವ್ ಕುಲಕರ್ಣಿ

Pages 60

₹ 16.00




Year of Publication: 2010
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಗುಲಬರ್ಗಾ - 585101

Synopsys

‘ಗೋರೇಬಾಳ ಹನುಮಂತರಾವ್’ ಲೇಖಕ ಸ್ವಾಮಿರಾವ್ ಕುಲಕರ್ಣಿ ಅವರು ರಚಿಸಿರುವ ಜೀವನ ಚಿತ್ರಣ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಮತ್ತು ದಾಸ ಸಾಹಿತ್ಯಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಬಹಳಷ್ಟಿದೆ ಎಂದು ನಾವೀಗ ಅಲೋಚಿಸುತ್ತಿರುವ ನೂರು ವರ್ಷಕ್ಕೂ ಪೂರ್ವದಲ್ಲಿಯೇ ಹರಿದಾಸ ಸಾಹಿತ್ಯಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಶ್ರೇಯಸ್ಸು ಗೋರೇಬಾಳ ಹನುಮಂತರಾಯರದು.

ದಾಸ ಸಾಹಿತ್ಯ ಸಂಗ್ರಹ, ಪರಿಷ್ಕರಣೆ, ಸಂಪಾದನೆ, ಪುಸ್ತಕ ಪ್ರಕಟಣೆ, ಮಾರಾಟ ಈ ಎಲ್ಲ ಕೆಲಸಗಳನ್ನು ಏಕಾಂಗಿಯಾಗಿಯೇ ಮಾಡಿದರು. ದಾಸ ಸಾಹಿತ್ಯ ಕಾರ್ಯಕ್ಕಾಗಿ ಒಳ್ಳೆಯ ಆದಾಯದ ವಕೀಲ ವೃತ್ತಿ ಬಿಟ್ಟರು, ಜನರಿಂದ ಹಣದ ಸಹಾಯ ದೊರಕದಾದಾಗ ದಾಸ ಸಾಹಿತ್ಯದ ಮೇಲಿನ ಪ್ರೀತಿ, ಗೌರವದಿಂದ ತಮ್ಮ ಹೊಲಗಳನ್ನು ಮಾರಿ, ಹಣವನ್ನು ಹಾಕಿ ತಾವು ಬಡವರಾಗಿ ಬಾಳುತ್ತಾ, ದಾಸ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ ಉದಾರ ವ್ಯಕ್ತಿತ್ವ ಇವರದಾಗಿದೆ. ಇಂತಹ ದಾಸ ಸಾಹಿತ್ಯ ಸಂರಕ್ಷಕರು. ಪೋಷಕರು ಆಗಿದ್ದ ಗೋರೇಬಾಳ ಹನುಮಂತರಾಯರ ಬದುಕು- ಸಾಧನೆಯ ಕಿರುಪರಿಚಯವೇ ಈ ಪುಸ್ತಕ.

About the Author

ಸ್ವಾಮಿರಾವ್ ಕುಲಕರ್ಣಿ

ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...

READ MORE

Related Books