ಜ್ಞಾನ ದಾಸೋಹಿ ದೊಡ್ಡಪ್ಪ ಅಪ್ಪ-ಲೇಖಕ ಪ್ರಭುಲಿಂಗ ನೀಲೂರೆ ಅವರ ಕೃತಿ. ಒಂದು ಸಂಸ್ಥಾನದ ಪೀಠಾಧಿಪತಿಗಳಾಗುವುದೇ ಬಹುದೊಡ್ಡ ಸಾಧನೆ, ಅದಕ್ಕಂಟಿಕೊಂಡಿರುವುದೇ ಪರಮಾರ್ಥ ಸಾಧನೆ. ಆ ಮೂಲಕವೇ ಮೋಕ್ಷ ಎಂದುಕೊಂಡವವರ ಮಧ್ಯೆ ಪೂಜ್ಯ ದೊಡ್ಡಪ್ಪ ಅವರು ತುಂಬಾ ಭಿನ್ನವಾಗಿ ಮನುಷ್ಯ ಪರ, ಮಹಿಳಾ ಪರ ಕಾಳಜಿಗಳನ್ನಿಟ್ಟುಕೊಂಡು ಕಾರ್ಯಸಾಧನೆ ಮಾಡಿದರು, ಆ ಮೂಲಕವೇ ಪೂಜ್ಯರಾದರು.
1934ರಲ್ಲಿ ಹೆಣ್ಣುಮಕ್ಕಳು ಮನೆಯ ಹೊಸ್ತಿಲ ಹೊರಗೆ ಕಾಲಿಡುವುದೇ ಪಾಪ, ಧರ್ಮದ್ರೋಹ ಎಂಬಂತಹ ವಾತಾವರಣದಲ್ಲಿ ಅವರಿಗೆ ಸ್ಪೂರ್ತಿಯ ಸೆಲೆಯಾಗಿ ಮೂಡಿಬಂದದ್ದು ಮಹಾದೇವಿ ಕನ್ಯಾಪ್ರೌಢ ಶಾಲೆ. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾಗದಿರಲಿ ಎಂದು ಸ್ವತಃ ಟಾಂಗಾಗಳನ್ನು ಇಡಿಸಿ ಆಯಾ ಓಣಿಗಳಿಗೆ ಅವುಗಳನ್ನು ಕಳುಹಿಸಿ, ಕರೆತಂದು ಅಕ್ಷರ ದಾಸೋಹಗೈಯ್ಯುವ ಮೂಲಕ ಅಂತರಂಗ-ಬಹಿರಂಗ ಶುದ್ಧಿಯಿಂದ ಮಾಡಿರುವುದು ಇಂದಿನವರಿಗೆ ಸ್ಪೂರ್ತಿ. ಸಂಸ್ಥಾನಕ್ಕೆ ಮಹಾತ್ಮ ಗಾಂಧೀಜಿಯವರ ಭೇಟಿ, ಕನ್ನಡ ಕಟ್ಟಲು ಶ್ರಮಿಸಿದ ರೀತಿ ಸೇರಿದಂತೆ ಅನೇಕ ಸಂಗತಿಗಳನ್ನುಲೇಖಕರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಲೇಖಕ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪ ಸಂಪಾದಕರು. 1990ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿ ಆರಂಭಿಸಿ, ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ಸಂಸ್ಥೆ ಮೂಲಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಬಿಸಿಲನಾಡು ಪ್ರಕಾಶನ ಸಂಸ್ಥೆಯೂ ನಡೆಸುತ್ತಿದ್ದಾರೆ. ಕೃತಿಗಳು: ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ (ಮಕ್ಕಳ ಕಥನ) ಹುಕುಂಪತ್ರ (ಐತಿಹಾಸಿಕ ನಾಟಕ) -ತತ್ವಪದಕಾರ ಚನ್ನೂರ ...
READ MORE