ಪ್ರೊ. ಆರ್. ವೇಣುಗೋಪಾಲ್ ಹಾಗೂ ಬಿ.ಎಸ್. ಜೈಪ್ರಕಾಶ್ ಅವರು ಸಂಯುಕ್ತವಾಗಿ ರಚಿಸಿದ ಕೃತಿ-ಗಿಲ್ಬರ್ಟ್ ನ್ಯೂಟನ್ ಲೂಯಿಸ್ (1875-1948) . ವಿಜ್ಞಾನ ಪುಸ್ತಕ ಮಾಲೆಯಡಿ ಈ ಕೃತಿ ಪ್ರಕಟಿಸಿದೆ. ಅಮೆರಿಕ ಮೂಲದ ಈ ವಿಜ್ಞಾನಿ ಫಿಜಿಕಲ್ ಕೆಮಿಸ್ಟ್ ಆಗಿದ್ದ. ವಸ್ತುವಿನಲ್ಲಿರುವ ಪರಮಾಣುಗಳ ಜೋಡಿ ಹಾಗೂ ಅವುಗಳ ರಾಸಾಯನಿಕ ಬಂಧ ಕುರಿತು ಅವರು ಅಧ್ಯಯನ ಮಾಡಿದ್ದಾರೆ. ವಿಕಿರಣ ಶಕ್ತಿಯಲ್ಲಿರುವ ಫೋಟಾನ್ ಎಂಬ ಪರಿಕಲ್ಪನೆಯನ್ನು ಈತನೇ ಪತ್ತೆ ಹಚ್ಚಿದ ಎಂಬ ಖ್ಯಾತಿ ಇವರಿಗಿದೆ. ಈ ವಿಜ್ಞಾನಿಯ ಕುರಿತು ಬದುಕು-ವೈಜ್ಞಾನಿಕ ಸಾಧನೆ ಕುರಿತು ಕೃತಿಯಲ್ಲಿ ಮಕ್ಕಳಿಗೆ ತಿಳಿಯುವ ಹಾಗೆ ಸರಳವಾಗಿ ರಚಿಸಲಾಗಿದೆ.
ಪ್ರೊಫೆಸರ್, ಲೇಖಕ ಆರ್. ವೇಣುಗೋಪಾಲ್ ಅವರು 1966ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬೆಂಗಳೂರಿನ ವಿಶ್ವೇಶ್ವರಪುರ ಕಾಲೇಜ್ ಆಫ್ ಸೈನ್ಸ್ನ ರಸಾಯನ ವಿಜ್ಞಾನ ವಿಭಾಗದಲ್ಲಿ ಮೂರು ದಶಕಗಳಿಗೂ ಮಿಗಿಲಾಗಿ ಸೇವೆ ಸಲ್ಲಿಸಿದರು. ಬಿ.ಎಸ್ಸಿ ಮತ್ತು ಬಿ.ಇ ವಿದ್ಯಾರ್ಥಿಗಳಿಗಾಗಿ ರಸಾಯನ ವಿಜ್ಞಾನದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ನಿವೃತ್ತಿಯ ನಂತರ ಸ್ವಂತ ಸ್ಥಳವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಸಂತೆಕಲ್ಲಹಳ್ಳಿಗೆ ಸ್ಥಳಾಂತರಗೊಂಡು ಆ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವಂತೆ ಹಲವಾರು ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಲೇಖಕ ಬಿ. ಎಸ್. ಜೈಪ್ರಕಾಶ್ ಅವರ ಸಹಯೋಗದಲ್ಲಿ ‘ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು’ ...
READ MORE