'ಗಾಂಧಿವಾದಿ ಮಾಲಿ ಮರಿಯಪ್ಪ' ಎಂಬುದು ಒಕ್ಕಲಿಗ ಸಾಧಕ ಮಾಲಿ ಮರಿಯಪ್ಪ ಅವರ ಜೀವನದ ಅಯಾಮಗಳನ್ನು ಕುರಿತಾಗಿ ಲೇಖಕ ಪ್ರೊ. ಶಿವರಾಮಯ್ಯ ರಚಿಸಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಹಿನ್ನಲೆ, ಜನನ, ಬಾಲ್ಯ ಮತ್ತು ವಿದ್ಯಾಭ್ಯಾಸ, ವಕೀಲರಾಗಿ, ಫೈಜ್‌ಪುರ ಅಧಿವೇಶನ, ಮಧುಗಿರಿಯಲ್ಲಿ ಕಾಂಗ್ರೆಸ್, ಶಿವಪುರ ಧ್ವಜ ಸತ್ಯಾಗ್ರಹ, ಜೈಲುವಾಸ, ಮೈಸೂರು ಚಲೋ ಚಳುವಳಿ, ಶಾಸಕರಾಗಿ-ಸಚಿವರಾಗಿ, ರಾಜಕೀಯ ಏರಿಳಿತಗಳು, ಅಂತಿಮ ದಿನಗಳು, ಉಪ ಸಂಹಾರ, ಅನುಬಂಧ ಆಧ್ಯಾಯಗಳನ್ನು ಈ ಪುಸ್ತಕವು ಹೊಂದಿದೆ.
ಹಳ್ಳಿಯ ರೈತ ಕುಟುಂಬದಿಂದ ಬಂದ ಮಾಲಿ ಮರಿಯಪ್ಪನವರು ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಯಾರಿಗೂ ಹಿಂದೆ ಬೀಳದ ರೀತಿಯಲ್ಲಿ ದುಡಿದರು. ತ್ಯಾಗ ಮಾಡಿದರು. ಸ್ವರಾಜ್ಯ ಸ್ಥಾಪನೆಯ ನಂತರವೂ ದೇಶ ಕಟ್ಟುವ ಕಾರ್ಯದಲ್ಲಿ ತಮ್ಮ ಕೊನೆಯ ಉಸಿರಿರುವ ತನಕ ದುಡಿದರು ಎಂದು ಕೃತಿಯ ಕುರಿತಾಗಿ ಡಿ. ದೇವರಾಜ ಅರಸ್ ಅವರು ಪ್ರಶಂಸಿಸಿದ್ದರೆ, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ , ಸರಳ ಸ್ವಭಾವದ ನಿಜಾವಾದ ಗಾಂಧೀ ಅನುಯಾಯಿಯಾಗಿದ್ದರೂ ಮರಿಯಪ್ಪನವರು ಸಪ್ಪನೆಯ ಅಲಸಿ ವ್ಯಕ್ತಿಯಲ್ಲ. ದೇಶದ ಹಿತದ ಪ್ರಶ್ನೆ, ಅದರಲ್ಲಿ ತಮ್ಮ ಭಾಗದ ಕಾರ್ಯದ ಪ್ರಶ್ನೆ ಬಂದಾಗ, ಅವರು ಉತ್ಸಾಹದಿಂದಲೂ ಪೂರ್ಣ ದಕ್ಷತೆ, ಚುರುಕು ಬುದ್ದಿವಂತಿಕೆಯ ರಾಜಕಾರಣ ನೈಪುಣ್ಯದಿಂದಲೂ ವರ್ತಿಸುತ್ತಿದ್ದರು’ ಎಂದು ಶ್ಲಾಘಿಸಿದ್ದಾರೆ.
ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...
READ MORE