ಲೇಖಕ ಮಂಜುನಾಥ ಮ. ಜುನಗೊಂಡ ಅವರ ಕೃತಿ- ಗಜಲ್ ಲೋಕದ ಸ್ವರ ಸಾಮ್ರಾಟ ರವೀಂದ್ರ ಹಂದಿಗನೂರ. ಸಂಖ್ಯೆ ಸಂಖ್ಯೆಯಲ್ಲಿ ಕಾಡುವ ಹಾಡುಗಳನ್ನು ಹಾಡುವ ಮೂಲಕ ಮೈಮನ ತಣಿಸಿದ ಗಾಯನ ಲೋಕದ ಸಾಮ್ರಾಟ ರವೀಂದ್ರ ಹಂದಿಗನೂರ ಅವರ ಕಂಠಸಿರಿಯನ್ನು ಇಲ್ಲಿ ಸವಿಸ್ತರವಾಗಿ ಚಿತ್ರಿಸಿದ್ದಾರೆ. ಗಜಲ್ ಲೋಕ ಎಂದರೆ ಉರ್ದುವಿಗೆ ಸೀಮಿತ 'ಎನ್ನುವ ಗೆರೆಯನ್ನು ವಿಶಾಲವಾಗಿ ಎಳೆದು ಕನ್ನಡ ಗಜಲ್ ಲೋಕದ ಸ್ವರ ಸಾಮ್ರಾಟನಾಗಿ ನಾಡಿನಲ್ಲಿ ಬಹಳಷ್ಟು ಖ್ಯಾತಿ ಪಡೆದಿದ್ದ ರವೀಂದ್ರ ಹಂದಿಗನೂರರ ಸಾಹಿತ್ಯ ಲೋಕದ ಏಳಿಗೆಯನ್ನು ಇಲ್ಲಿ ಎಳೆ ಎಳೆಯಾಗಿ ಕೃತಿಯಲ್ಲಿ ಲೇಖಕರು ವಿವರಿಸಿದ್ದಾರೆ.
ಲೇಖಕ ಮಂಜುನಾಥ ಮ. ಜುನಗೊಂಡ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎ ಪದವೀಧರರು. ಪತ್ರಿಕೆಗಳಲ್ಲಿ ಅಂಕಣ ಬರಹಗಳು ಪ್ರಕಟವಾಗಿವೆ. ಕೃತಿಗಳು: ನನಗೆ ಭಗತ್ ಸಿಂಗ್ ಮೆಟ್ಟಿದ ಮೇಟುಗಳು ಬೇಕು(ಕವನ ಸಂಕಲನ), 'ನಾನು', ನನ್ನೂರು ನನ್ನವರು(ಲೇಖನಗಳ ಸಂಕಲನ), ಭರವಸೆ (ಪ್ರಬಂಧ ಸಂಕಲನ) ...
READ MORE