ಜಿ. ವೆಂಕಟಸುಬ್ಬಯ್ಯ ಕನ್ನಡಪ್ರಜ್ಞೆ

Author : ಜಿ.ವಿ. ಅರುಣ

Pages 152

₹ 100.00




Year of Publication: 2021
Published by: ಕನ್ನಡ ಅಭಿವೃದ್ದಿ ಪ್ರಾಧಿಕಾರ
Address: ಮೂರನೇ ಮಹಡಿ ವಿಧಾನಸೌಧ, ಬೆಂಗಳೂರು-560001

Synopsys

‘ಜಿ. ವೆಂಕಟಸುಬ್ಬಯ್ಯ ಕನ್ನಡಪ್ರಜ್ಞೆ’ ಕೃತಿಯು ಜಿ.ವಿ ಅರುಣ ಅವರ ಸಂಪಾದಿತ ಬರಹಗಳ ಕನ್ನಡ ಕಾಯಕ ಮಾಲೆ-14 ಸರಣಿ ಸಂಕಲನವಾಗಿದೆ. ಟಿ.ಎಸ್.ನಾಗಾಭರಣ ಈ ಕೃತಿಯ ಗೌರವ ಸಂಪಾದಕರಾಗಿದ್ದು, ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಕೃತಿಯ ಪ್ರಧಾನ ಸಂಪಾದಕರಾಗಿದ್ದಾರೆ. ಈ ಕೃತಿಯಲ್ಲಿ 17 ಲೇಖನಗಳಿದ್ದು, ಕನ್ನಡ ನಮ್ಮ ತಾಯಿನುಡಿ, ಶಾಸನಗಳಲ್ಲಿ ವ್ಯಕ್ತವಾಗಿರುವ ಕನ್ನಡದ ಸಂಸ್ಕೃತಿ ಮತ್ತು ಜನಜೀವನ, ಕನ್ನಡ ಮನಸ್ಸು ಎಂದರೇನು?, ಭಾಷೆ-ಮಾನವನ ಮನಸ್ಸಿನ ಬೃಹದಾಯುಧಾಗಾರ, ಭಾಷೆಗಳ ಸಾವು, ಮೃತ ಭಾಷೆ, ಪ್ರಾಚೀನ ಸಮೃದ್ಧ ಭಾಷೆ, ಇಂಧು ಬಳಕೆಯಲ್ಲಿರುವ ಕನ್ನಡ, ಕನ್ನಡ ಭಾಷೆಯಿಂದ ಭಾವೈಕ್ಯ, ಕರ್ನಾಟಕದ ಏಕೀಕರಣ ಒಂದು ಅಪೂರ್ವ ಚರಿತ್ರೆ, ಕರ್ನಾಟಕದ ಏಕೀಕರಣದಲ್ಲಿ ನನ್ನ ಕಿರಿಯ ಕಾಣಿಕೆ, ನಾಡಿನ ನಲವತ್ತು ವರ್ಷಗಳ ತೊಳಲಾಟದ ಸಾರ್ಥಕ ದಾಖಲೆ : “ಕರ್ನಾಟಕ ಏಕೀಕರಣ ಇತಿಹಾಸ”, ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ದಿ, ”ಶಾಸ್ತ್ರೀಯ??” ಭಾಷೆಗಾಗಿ ಕನ್ನಡ, ಕನ್ನಡ ಜಾಗ್ರತಿ ಎತ್ತ ಸಾಗಿದೆ?, ಕನ್ನಡ ಶಬ್ಧ ಸೃಷ್ಟಿಗೆ ಕಣಜವಾಗಿರುವ ಸಂಸ್ಕೃತ, ಪಠ್ಯಪುಸ್ತಕದಿಂದ ‘ಋ’ಕಾರದ ಎತ್ತಂಗಡಿ, ಇಗೋ ಕನ್ನಡದಿಂದ, ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಜೀವನ-ಸಾಧನೆ-ಕೃತಿಗಳು ಇವೆಲ್ಲಾವುಗಳನೆಲ್ಲಾ ಒಳಗೊಂಡಿದೆ.

About the Author

ಜಿ.ವಿ. ಅರುಣ

ಜಿ.ವಿ. ಅರುಣ ಅವರ ಪೂರ್ವಿಕರ ಸ್ಥಳ ಗಂಜಾಂ. ಆದರೆ ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ. ಮೆಕ್ಯಾನಿಕಲ್ ಇಂಜಿನಿಯರ್, ಎಂ.ಬಿ.ಎ ಪದವೀಧರ.ಮಿನಿ ನವರತ್ನ ಉದ್ದಿಮೆ ಮೆಕಾನ್ ಲಿಮಿಟೆಡ್ ನಲ್ಲಿ ಟ್ರೈನಿಯಾಗಿ ಸೇರಿ ಪ್ರಧಾನ ಮಹಾ ಪ್ರಬಂಧಕನಾಗಿ ನಿವೃತ್ತಿ ಹೊಂದಿರುತ್ತಾರೆ. ಕನ್ನಡದ ಅನೇಕ ಮಾಸಪತ್ರಿಕೆಗಳಲ್ಲಿ ಮಾಸ, ವಾರ, ದಿನಪತ್ರಿಕೆಗಳಲ್ಲಿ ಜಿ.ವಿ.ಅರುಣ ಅವರ ಸಣ್ಣಕತೆ, ವೈಜ್ಞಾನಿಕ ಲೇಖನ, ಕವಿತೆ, ಮಕ್ಕಳ ಕತೆ, ಹಾಗೂ ಹಾಸ್ಯ ಲೇಖನಗಳು, ಪ್ರಕಟವಾಗಿರುತ್ತದೆ. ಕೃತಿಗಳು : ಇಂಧನಗಳು, ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು ...

READ MORE

Related Books