ಡಾ. ಮೀನಾಕ್ಷಿ ಬಾಳಿಯವರ "ಎರಡು ನಾಟಕಗಳು "ಪುಸ್ತಕವನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ಬಂಡಾಯದ ಸಂತ ಕಡಕೋಳ ಮಡಿವಾಳಪ್ಪ, ಅನುಭವದ ಖೈನೂರ್ ಕೃಷ್ಣಪ್ಪ, ಕುರಿತು ರಚನೆಗೊಂಡಿದ್ದು. ಎರಡು ನಾಟಕಗಳಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮಡಿವಾಳಪ್ಪ ಮತ್ತು ಖೈನೂರ ಕೃಷ್ಣಪ್ಪ ಅವರ ಬಗ್ಗೆ ಇಲ್ಲಿವರೆಗೂ ಪ್ರಚಲಿತದಲ್ಲಿದ್ದ ನಂಬಿಕೆಗಳನ್ನು ಕಾರಣಕೊಟ್ಟು ಅಲ್ಲಗಳೆಯುವುದು. ಅವರ ಅನೇಕ ಮೌಲ್ಯಗಳನ್ನು ನಾಟಕದ ಮುಖಾಂತರ ಮರು ಪ್ರತಿಷ್ಠಾಪಿಸುವುದು. ಈ ನಾಟಕಗಳಲ್ಲಿ ಬಳಸಿದ ಭಾಷೆ ಬಹಳ ಸರಳವಾಗಿದ್ದು,ಪ್ರತಿಯೊಂದು ದೃಶ್ಯಗಳ ಜೋಡಣೆ ಅಮೋಘವಾಗಿದ್ದನ್ನು ಗಮನಿಸಬಹುದಾಗಿದೆ. ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 168 ಪುಟಗಳು 150 ರುಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ...
READ MORE