ಬಹಳಷ್ಟು ವೇಳೆ ಸಾಮಾನ್ಯರು, ಸಾಮಾನ್ಯರ ಬದುಕು ಬರಹ ವಸ್ತುವಾದುದು ಬಹಳ ಕಡಿಮೆ. ತಾವಿದ್ದ ಕ್ಷೇತ್ರದಲ್ಲೇ ಸಾಕಷ್ಟು ಬದಲಾವಣೆ, ಬೆಳಕು ಮೂಡಿಸುತ್ತಿದ್ದರೂ ಅಂಥವರನ್ನು ಯಾರೂ ಗುರುತಿಸದೆ ಕೊನೆವರೆಗೂ ಎಲೆಮರೆಯಕಾಯಿಯಾಗಿಯೇ ಉಳಿದಿರುತ್ತಾರೆ. ಅಂತಹ ಪ್ರತಿಭಾವಂತ ಕವಿ, ಕಲಾವಿದ, ಸಮಾಜ ಸೇವಕರನ್ನು ಗುರುತಿಸಿ ಅವರ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಸಾಮಾನ್ಯರ ಬದುಕು ಹಾಗೂ ಬರಹವನ್ನೇ ವಸ್ತುವಾಗಿಸಿಕೊಂಡು ಬರೆದ ಈ ಕೃತಿಯು ೨೫ ಮುತ್ತುಗಳ ಅಪ್ರತಿಮ ಸಾಧನೆಯ ಗುಚ್ಛ.
ಸಣ್ಣ ಸಣ್ಣ ಸಾಲುಗಳ ಇಲ್ಲಿನ ಬರಹ ಒಬ್ಬ ವ್ಯಕ್ತಿಯ ಗುಣ ವಿಶೇಷಗಳನ್ನು ಗೆರೆ ಎಳೆದಂತೆ ಚಿತ್ರಿಸಲಾಗಿದೆ. ಅನ್ನದ ಅಗಳಿನ ಮೇಲೆ ಅನ್ನ ಕುದ್ದಿದೆಯೋ ಇಲ್ಲವೋ ಎಂಬುದನ್ನು ಗುರುತಿಸಿಕೊಳ್ಳುವಂತೆ ಒಂದು ಸಣ್ಣ ಟಿಪ್ಪಣೆ ರೂಪದ ಪರಿಚಯದಿಂದಲೇ ಸಂಬಂಧಿಸಿದ ವ್ಯಕ್ತಿಯ ವ್ಯಕ್ತಿತ್ವವನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗುವಂತಿವೆ ಇಲ್ಲಿನ ಲೇಖನಗಳು. ತಾವಿದ್ದ ಜಾಗದಲ್ಲಿಯೇ ಪುಟ್ಟ ಹಣತೆ ಹಚ್ಚಿ ಸುತ್ತಲ ಪ್ರದೇಶಕ್ಕೆ ಹೇಗೆ ದಾರಿದೀಪ ವಾಗಿದ್ದಾರೆ ಎಂದು ಹೇಳುವುದೇ ಈ ಕೃತಿಯ ಪ್ರಮುಖ ಆಶಯವಾಗಿದೆ. ಆಮೂಲಕ ನಮ್ಮ ಅಸ್ಮಿತೆಯನ್ನು ಉಳಿಸುವ ಉಮೇದು ಕೂಡ ಈ ಕೃತಿಯಲ್ಲಿದೆ.
ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರು. 1973ರ ಏಪ್ರಿಲ್ 1ರಂದು ಶಹಾಪುರದಲ್ಲಿ ಜನಿಸಿದರು. ತಂದೆ ಹೆಸರಾಂತ ಪತ್ರಕರ್ತ-ವಿಚಾರವಾದಿ ಲಿಂಗಣ್ಣ ಸತ್ಯಂಪೇಟೆ. ತಂದೆಯ ಪ್ರಖರ ವೈಚಾರಿಕತೆಯ ಬೆಳಕಿನಲ್ಲಿ ಬೆಳೆದ ಶಿವರಂಜನ್ ಅವರು ಕಲ್ಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕ (ಬಿ.ಎ.) ಮತ್ತು ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿದ್ದಾರೆ. ಶಹಾಪುರದ ಚರಬಸವೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಬಾಪುಗೌಡ ದರ್ಶನಾಪುರ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಹವ್ಯಾಸಿ ಪತ್ರಕರ್ತ ಆಗಿದ್ದರು. ಸಂಜೆವಾಣಿ ಪತ್ರಿಕೆಯ ಶಹಾಪುರದ ವರದಿಗಾರರಾಗಿದ್ದರು. ನಂತರ ಪೂರ್ಣ ಪ್ರಮಾಣದಲ್ಲಿ ಪತ್ರಿಕಾ ವೃತ್ತಿಗೆ ...
READ MORE