ಇಪ್ಪತ್ತನೆಯ ಶತಮಾನಕ್ಕೆ ಕೀರ್ತಿ ತಂದ ಮಹಾನ್ ವ್ಯಕ್ತಿಗಳು ಯಾರು ಎಂದು ಗಣನೆಗೆ ತೆಗೆದುಕೊಂಡಾಗ ಯಾವ ಸಂಶಯಕ್ಕೂ ಆಸ್ಪದವಿಲ್ಲದಂತೆ ಹೊರಬಿದ್ದ ಹೆಸರು -ಐನ್ ಸ್ಟೈನ್ . ಅವರ ಲೋಕ ಪ್ರಸಿದ್ದಿಗೆ ಕಾರಣ ಅವರ ಭೌತ ವಿಜ್ಞಾನದಲ್ಲಿಯ ಕೊಡುಗೆಗಿಂತ ಹೆಚ್ಚಾಗಿ ಅವರಲ್ಲಿ ಕಂಡು ಬಂದ ಮಾನವೀಯತೆ. ಆ ಮನಸ್ಸಿನ ವಿಸ್ತಾರ ಮತ್ತು ಅದರ ವೈವಿಧ್ಯತೆ. ಇಂಥ ಮಹನೀಯ ಗುಣವನ್ನು ಪಡೆದವರು ಐನ್ ಸ್ಟೈನ್. ಅವರ ಕೀರ್ತಿ ಯೂರೋಪಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ವಿಶ್ವವನ್ನೇ ಹಬ್ಬಿತ್ತು. ಅಂತಹ ಮಹಾವ್ಯಕ್ತಿಯ ಜೀವನ ಚಿತ್ರಣವೇ ಈ ಕೃತಿ.
ಬಿ.ಪಿ. ರಾಧಾಕೃಷ್ಣ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಿ.ಪುಟ್ಟಯ್ಯ, ತಾಯಿ ವೆಂಕಮ್ಮ. ರಾಧಾಕೃಷ್ಣರ ವಿದ್ಯಾಭ್ಯಾಸವೆಲ್ಲ ನಡೆದಿದ್ದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದ ಪದವಿ (ಬಿ.ಎಸ್ಸಿ.ಆನರ್ಸ್) 1937ರಲ್ಲಿ ಪಡೆದು, ಮೈಸೂರು ಸಂಸ್ಥಾನದ ಭೂವಿಜ್ಞಾನ ಇಲಾಖೆಗೆ ಕ್ಷೇತ್ರ ಸಹಾಯಕರಾಗಿ ಸೇರಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿರ್ದೇಶಕರಾಗಿ ನಿವೃತ್ತರಾದರು. ರಾಮನಗರದ ಕಲ್ಲುಬಂಡೆಗಳ ಬಗ್ಗೆ ವಿಶೇಷಾಧ್ಯಯನ ಕೈಗೊಂಡು ಪ್ರಬಂಧ ಮಂಡಿಸಿ, ಮೈಸೂರು ವಿಶ್ವವಿದ್ಯಾಲಯದಿಂದ 1954ರಲ್ಲಿ ಡಾಕ್ಟರೇಟ್ ಪಡೆದರು. ನೇರನುಡಿಯ, ನಿಷ್ಠುರ ವರ್ತನೆಯ, ಸಮಯ ಪ್ರಜ್ಞೆಯ ಖಂಡಿತವಾದಿಯಾಗಿದ್ದರು. ಕರ್ನಾಟಕದ ಶಿಲೆಗಳ ಬಗ್ಗೆ ವಿಶೇಷಾಧ್ಯಯನ ಮಾಡಿದಂತೆ ಭೂಮಿಯ ಒಡಲಲ್ಲಿರುವ ಖನಿಜ ನಿಕ್ಷೇಪವನ್ನು ಗುರುತಿಸಿ, ಕರ್ನಾಟಕದ ಅಭ್ಯುದಯಕ್ಕೆ ಬಳಸಿಕೊಳ್ಳುವಂತಹ ...
READ MORE