ಡಾ. ಜಯದೇವಿತಾಯಿ ಲಿಗಾಡೆ

Author : ಕಲ್ಯಾಣರಾವ ಜಿ. ಪಾಟೀಲ

Pages 88

₹ 50.00




Year of Publication: 2013
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಸೂಪರ್ ಬಜಾರ್, ಮುಖ್ಯರಸ್ತೆ, ಕಲಬುರಗಿ-585101

Synopsys

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ರಚಿಸಿದ ಕೃತಿ- ಡಾ. ಜಯದೇವಿ ತಾಯಿ ಲಿಗಾಡೆ. ಬಸವಕಲ್ಯಾಣದಲ್ಲಿ ಏಳು ವರ್ಷ ಉಪನ್ಯಾಸಕರಾಗಿದ್ದಾಗ ಲೇಖಕರು ಅಲ್ಲಿ ಜಯದೇವಿತಾಯಿ ಲಿಗಾಡೆಯವರ ಭಕ್ತಿಭವನದಲ್ಲಿಯೇ ಹೆಚ್ಚಿಗೆ ಕಾಲ ಕಳೆಯುತ್ತಿದ್ದರು. ಅವರ ಬದುಕು ಮತ್ತು ಬರಹ ಇವರ ಮೇಲೆ ಬಹಳ ಪ್ರಭಾವ ಬೀರಿದೆ. ಜಯದೇವಿತಾಯಿಯವರ ಬಗೆಗೆ ವಿವಿಧೆಡೆ ಉಪನ್ಯಾಸ ನೀಡಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಅವರ ಬಗೆಗೆ ರೂಪಕ ಮತ್ತು ಸಂವಾದಗಳನ್ನು ಏರ್ಪಡಿಸಿದ್ದಾರೆ. ಕಳೆದ ಎರಡುವರೆ ದಶಕಗಳಲ್ಲಿ (1987ರಿಂದ 2012ರವರೆಗೆ) ವಿವಿಧ ವಿಚಾರ ಸಂಕಿರಣಗಳಲ್ಲಿ ಲೇಖಕರು ಮಂಡಿಸಿದ ವಿಚಾರಗಳೆಲ್ಲವನ್ನೂಸಂಯೋಜಿಸಿದ ಕೃತಿ ಇದು. ಕೃತಿಗೆ ಮುನ್ನುಡಿ ಬರೆದ ಡಾ. ಜಯಶ್ರೀ ದಂಡೆ ಅವರು ‘ ಡಾ.. ಕಲ್ಯಾಣರಾವ ಜಿ. ಪಾಟೀಲರು ಡಾ. ಜಯದೇವಿತಾಯಿ ಲಿಗಾಡೆ ಅವರನ್ನು ಹತ್ತಿರದಿಂದ ಕಂಡವರು. ಹೀಗಾಗಿ ತಾಯಿಯವರ ಬಗೆಗೆ ಅಧಿಕೃತ ಮಾಹಿತಿಗಳನ್ನು ನೀಡಿದ್ದಾರೆ. ಅಧುನಿಕ ಯುಗದ ಶರಣೆ ಜಯದೇವಿತಾಯಿ ಲಿಗಾಡೆ ಅವರ ಮತ್ತು ಅವರ ಕುಟುಂಬ ವರ್ಗದವರ ಪರಿಸರವು ಕಾರಣವಾಗಿರಲೇಬೇಕು. ಅವೆಲ್ಲದರ ಫಲವೇ ಈ ಕೃತಿ, ಡಾ. ಜಯದೇವಿತಾಯಿ ಲಿಗಾಡೆ ಅವರ ಜೀವನ ಸಾಹಿತ್ಯ ಮತ್ತು ಸಾಧನೆಯನ್ನು ಕೃತಿಯುದ್ದಕ್ಕೂ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಡಾ. ಜಯದೇವಿತಾಯಿ ಲಿಗಾಡೆ ಅವರು ಈ ಶತಮಾನ ಕಂಡ ಅಪರೂಪದ ವ್ಯಕ್ತಿತ್ವ. ಅವರ ಜನ್ಮಶತಮಾನೋತ್ಸವದ ಶುಭಗಳಿಗೆಯಲ್ಲಿ ಈ ಕೃತಿ ಹೊರ ಬರುತ್ತಿರುವುದೂ ಸುಯೋಗ’ ಎಂದು ಪ್ರಶಂಸಿಸಿದ್ದಾರೆ.

ಈ ಹೊತ್ತಿಗೆಯಲ್ಲಿ 11 ಅಧ್ಯಾಯಗಳಿವೆ. ಜಯದೇವಿತಾಯಿ ಲಿಗಾಡೆ ಅವರು ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿಮಾನವನ್ನು ಸ್ಮರಿಸಲಾಗಿದೆ. ಕೌಟುಂಬಿಕ ಜೀವನ ಎಂಬ ಅಧ್ಯಾಯದಲ್ಲಿ ಅವರು ಹುಟ್ಟಿ ಬೆಳೆದು ಬಂದ ತವರುಮನೆ ವಾರದ ಅವರ ಮತ್ತು ಪತಿ ಲಿಗಾಡೆ ಅವರ ಮನೆತನಗಳ ಪರಿಸರದ ಪರಿಚಯ ಇದೆ. 3ನೇ ಅಧ್ಯಾಯದಲ್ಲಿ ಜಯದೇವಿತಾಯಿ ಲಿಗಾಡೆಯವರು ಸಾಮಾಜಿಕವಾಗಿ ಸೇವೆಗೆ ಪ್ರೇರಣೆ ಪಡೆದುಕೊಂಡ ಮತ್ತು ಅವರು ಇಡೀ ಜೀವನವನ್ನು ಸಮಾಜಕ್ಕಾಗಿ ಸಮರ್ಪಿಸಿಕೊಂಡದ್ದನ್ನು ವಿವರಿಸಿದೆ. ಶಿಕ್ಷಣ, ಸಂಘಟನೆ ಮತ್ತು ಸಹಕಾರ-40ನೇ ಅಧ್ಯಾಯದಲ್ಲಿ ಜಯದೇವಿತಾಯಿ ಲಿಗಾಡೆಯವರು ಅಂದು ಸ್ತ್ರೀಶಿಕ್ಷಣ ಮತ್ತು ಮಹಿಳೆಯರಲ್ಲಿ ಆರೋಗ್ಯದ ಬಗೆಗೆ ಮೂಡಿಸಿದ ಅರಿವಿನ ವಿವರ ಇದೆ. ರಾಷ್ಟ್ರಪ್ರೇಮ -5ನೇ ಅಧ್ಯಾಯದಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಸೊಲ್ಲಾಪುರದಲ್ಲಿ ಜಯದೇವಿತಾಯಿಯವರು ಹಮ್ಮಿಕೊಂಡ ವಿಧಾಯಕ ಕಾರ್ಯಕ್ರಮಗಳು, ಮಹಾತ್ಮ ಗಾಂಧೀಜಿಯವರು ಅಗಲಿದಾಗ ಸಲ್ಲಿಸಿದ ಅಶ್ರುತರ್ಪಣದ ಕಾರ್ಯಕ್ರಮಗಳು, ರಜಾಕಾರ್ ಚಳವಳಿ ಸಂದರ್ಭದಲ್ಲಿ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು ಭಾಗಗಳಿಂದ ಸೊಲ್ಲಾಪುರಕ್ಕೆ ಹೋದ ನಿರಾಶ್ರಿತರಿಗೆ ಅವರು ತಮ್ಮ ಹೊಲದಲ್ಲಿಯೇ ಆಶ್ರಯ ನೀಡಿ ಅನ್ನ, ಅರಿವೆ, ಆರೋಗ್ಯದ ಬಗೆಗೆ ಕಾಳಜಿ ವಹಿಸಿದ ವಿವರ ಮತ್ತು ಅಂದು ಸೊಲ್ಲಾಪುರ ಪರಿಸರದಲ್ಲಿ ಬಡಜನರಿಗಾಗಿ ನೇತ್ರ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡಿರುವ ಚಟುವಟಿಕೆಗಳ ಮಾಹಿತಿಯೂ ಇಲ್ಲಿದೆ. ನಾಡುನುಡಿ ಸೇವೆ ಎಂಬ 6ನೇ ಅಧ್ಯಾಯದಲ್ಲಿ ಜಯದೇವಿತಾಯಿ ಲಿಗಾಡೆಯವರು 1952ರ ಸುಮಾರಿಗೆ ಕರ್ನಾಟಕದ ಏಕೀಕರಣಕ್ಕಾಗಿ, ರಾಜ್ಯ ನಿರ್ಮಾಣಕ್ಕಾಗಿ ಮತ್ತು ರಾಜ್ಯ ನಿರ್ಮಾಣವಾದ ನಂತರ ಹೊರನಾಡಿನಲ್ಲಿ ಉಳಿದ ಕನ್ನಡ ಪ್ರದೇಶವನ್ನು ರಾಜ್ಯದಲ್ಲಿ ವಿಲೀನಗೊಳಿಸಲು ಮಾಡಿದ ಸಾಹಸಗಾಥೆ ಇದೆ. ಬಸವಕಲ್ಯಾಣ ಎಂಬ7ನೇ ಅಧ್ಯಾಯದಲ್ಲಿ ಜಯದೇವಿತಾಯಿಯವರು ತಮ್ಮ ಕಿರಿಯ ಮಗಳು ಲಲ್ಲೇಶ್ವರಿ ಮತ್ತು ಅಳಿಯ ಡಾ. ಶಂಕರಣ್ಣ ಮೂಗಿಯವರೊಂದಿಗೆ ಬಸವಕಲ್ಯಾಣಕ್ಕೆ ಬಂದು ಅಲ್ಲಿ ಭಕ್ತಿಭವನ ನಿರ್ಮಿಸಿ ಕೊನೆಗೆ ಶರಣರನ್ನು ನೆನೆಯುತ್ತ ಕೊನೆ ಉಸಿರು ಬಿಟ್ಟ ಘಟನೆಗಳ ಚಿತ್ರಣ ಇದೆ. ಅನುಭಾವ ಸಾಹಿತ್ಯ -8ನೇ ಅಧ್ಯಾಯದಲ್ಲಿ ಜಯದೇವಿತಾಯಿ ಲಿಗಾಡೆಯವರ ಒಂಬತ್ತು ಕನ್ನಡ ಕೃತಿಗಳು ಮತ್ತು ಒಂಬತ್ತು ಮರಾಠಿ ಕೃತಿಗಳು ಮತ್ತು ಅಪ್ರಕಟಿತ ಮೂರು ಕೃತಿಗಳ ಪರಿಚಯವಿದೆ. ದಾರ್ಶನಿಕ ಮಹಾಕಾವ್ಯ-9ನೇ ಅಧ್ಯಾಯದಲ್ಲಿ ಜಯದೇವಿತಾಯಿ ಲಿಗಾಡೆಯವರು ರಚಿಸಿದ ಆಧುನಿಕ ತ್ರಿಪದಿ ಮಹಾಕಾವ್ಯದ ವಸ್ತುವಿನ್ಯಾಸ, ಪ್ರೇರಣೆ, ಸನ್ನಿವೇಶಗಳ ನಿರ್ಮಾಣ ಕೌಶಲ್ಯ, ವರ್ಣನೆಗಳ ವಿವರ ಇದೆ. ಸಂದೇಶ ಮತ್ತು ಸಮಾರೋಪ ಎಂಬ 10ನೇ ಅಧ್ಯಾಯದಲ್ಲಿ ಜಯದೇವಿತಾಯಿಯವರ ಜೀವನ ಮತ್ತು ಸಾಹಿತ್ಯದ ಸಂದೇಶವಿದೆ. ಕೊನೆಗೆ ಅನುಬಂಧಗಳಲ್ಲಿ ಜಯದೇವಿತಾಯಿ ಲಿಗಾಡೆಯವರ ಕೆಲವು ಮಹತ್ವದ ಪದಗಳನ್ನು, ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಮಾಡಿದ ಭಾಷಣ, 770 ಅಮರ ಗಣಾಧೀಶ್ವರರ ಸ್ಮಾರಕ ಮಹೋತ್ಸವದ ಮಹಿಳಾ ಪರಿಷತ್ತಿನ ಉದ್ಘಾಟನಾ ಭಾಷಣ ಮತ್ತು ಕೆಲವು ಅಪರೂಪದ ಭಾವಚಿತ್ರಗಳನ್ನು ಪ್ರಕಟಿಸಲಾಗಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books