ಸಾಹಿತಿ ಡಿ.ವಿ.ಜಿ ಎಂದೇ ಖ್ಯಾತಿಯ ಡಿ.ವಿ.ಗುಂಡಪ್ಪ ಅವರ ಜೀವನ ಹಾಗೂ ಸಾಹಿತ್ಯಕ ಸಾಧನೆ ಕುರಿತು ನೀಲತ್ತಹಳ್ಳಿ ಕಸ್ತೂರಿ ಅವರು ಬರೆದ ಕೃತಿ ಇದು. ಡಿವಿಜಿ ಕುರಿತ ಹಿನ್ನೆಲೆಯೊಂದಿಗೆ ಆರಂಭವಾಗುವ ಕೃತಿಯು ಎಳೆತನ, ಕಲಿಕೆ, ಉದ್ಯೋಗ, ಪತ್ರಿಕೆಯ ಪಾಡು, ರಾಜಕಾರಣದಲ್ಲಿ, ಸೇವೆಯ ಹಲವು ಹಾದಿಗಳು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಗೌರವ ಪ್ರಶಸ್ತಿಗಳು, ಮರಳಿ ಮನೆಗೆ, ವ್ಯಕ್ತಿತ್ವ, ಮೆಲುಕಿಗೆ ಮೇವು, ಅನುಬಂಧದಲ್ಲಿ ಬದುಕಿನ ಮೆಟ್ಟಿಲುಗಳು ಹಾಗೂ ಡಿವಿಜಿ ವಾಙ್ಮಯ ಹೀಗೆ ವಿವಿಧ ಅಧ್ಯಾಯಗಳಡಿ ಡಿವಿಜಿ ಅವರ ಬದುಕಿನ ಸಮಗ್ರ ಪರಿಚಯ ನೀಡಲಾಗಿದೆ.
ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...
READ MORE