ಸಾಹಿತಿ ಡಾ. ಸಿ.ಕೆ. ನಾವಲಗಿ ಅವರ ಬದುಕು, ಬರೆಹ ಸಾಧನೆಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡುವ ಕೃತಿ ಇದು. ಡಾ. ಸುರೇಶ ಹನಗಂಡಿ ಹಾಗೂ ಪ್ರಕಾಶ ಗಿರಿಮಲ್ಲನವರ ಅವರು ಈ ಕೃತಿಯನ್ನು ರಚಿಸಿದ್ದಾರೆ. ನಾವಲಗಿ ಅವರ ಜೀವನ ಮತ್ತು ಸಾಧನೆ, ಜಾನಪದ ಸಂಶೋಧನೆ-ವಿಮರ್ಶೆ, ವಚನ ಸಾಹಿತ್ಯ - ಜಾನಪದ ವಿಮರ್ಶೆ, ವ್ಯಕ್ತಿ ಚಿತ್ರ-ಜೀವನ ಚರಿತ್ರೆ, ಸಂಕೀರ್ಣ ಸಾಹಿತ್ಯ, ಸಂಪಾದಿತ ಕೃತಿಗಳು, ಸಂದರ್ಶನ, ಜೀವನದ ಪ್ರಮುಖ ಘಟನೆಗಳು, ಅವರ ಬರಹ ಪ್ರಪಂಚದ ಕುರಿತು ವಿವರಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ (ಜನನ : 28-4-1980) ಜನಿಸಿದ ಪ್ರಕಾಶ ಗಿರಿಮಲ್ಲನವರ ಶರಣ ಸಾಹಿತ್ಯ, ಸಂಸ್ಕೃತಿ ಪರಿಸರದಲ್ಲಿ ಬೆಳೆದು ಬಂದ ಒಬ್ಬ ಭರವಸೆಯ ಯುವ ಬರಹಗಾರ. ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರು ಸ್ಥಾಪಿಸಿದ ಉಚಿತ ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದು ಬೆಳೆದವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ’ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ (ವಚನ ಅಧ್ಯಯನ ಕೇಂದ್ರ)ದಲ್ಲಿ 20 ವರ್ಷಗಳ ಕಾಲ ಗ್ರಂಥಾಲಯ ಸಹಾಯಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE