ಇಡೀ ಭಾರತವನ್ನು ವಸಾಹತುಶಾಹಿ ಆವರಿಸಿಕೊಂಡಿತ್ತು. ದೇಶದಲ್ಲಿ ಆಂತರಿಕ ವೈರುಧ್ಯಗಳು ಹೆಚ್ಚುತ್ತಿದ್ದವು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಹಲವಾರು ಮಹನೀಯರು ಹಗಲು-ರಾತ್ರಿ ದುಡಿದು ನವರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪೈಕಿ, ಡಾ. ಬಾಬು ಜಗಜೀವನರಾಮ್ ಪ್ರಮುಖರು. ಶ್ರೇಣಿಕೃತ ಹಿಂದೂ ಸಮಾಜ ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಅಲಕ್ಷಿತ ಸಮುದಾಯಗಳನ್ನು ಹೊಸ ಮನ್ವಂತರದೆಡೆಗೆ ಕರೆದುಕೊಂಡು ಹೋಗುವಲ್ಲಿ ಇವರು ಗಣ್ಯರು. ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿ ಸರ್ವರ ಸಮಾನ ಶಿಕ್ಷಣ ಪದ್ಧತಿಯನ್ನು ಪ್ರತಿಪಾದಿಸಿದರು. ಭಾರತದಲ್ಲಿಯ ವರ್ಣ ವ್ಯವಸ್ಥೆ ಸುಧಾರಣೆಗೆ ಶ್ರಮಿಸಿದರು. ಇಂತಹ ನಾಯಕರ ಜೀವನ-ಸಾಧನೆ-ಹೋರಾಟಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.