ಅಲ್ಜೀರಿಯಾದೇಶದ ಜಾಕ್ಯೂಸ್ ಡೆರಿಡಾ (1930)ಅವರ ಬದುಕು-ಸಾಹಿತ್ಯ ಸಾಧನೆ, ಚಿಂತನೆಗಳ ಎತ್ತರಗಳನ್ನು ಕುರಿತು ಲೇಖಕ ಡಾ. ಮಾಧವ ಪೆರಾಜೆ ಅವರು ಬರೆದ ಕೃತಿ-ಡೆರಿಡಾ. ಈ ಕೃತಿಯು 2003ರಲ್ಲಿ ಮೊದಲ ಮುದ್ರಣ ಕಂಡಿತ್ತು. ಒರೆಯಿಂದ ಕಳಚಿದ ಖಡ್ಗ, ತಾತ್ವಿಕ ಹಿನ್ನೆಲೆ: ಸಸ್ಯೂರನ ಚಿಂತನೆಗಳು, ಡೆರಿಡಾನ ಚಿಂತನೆಗಳು, ಸಂರಚನೋತ್ತರವಾದ ಎಂದರೇನು?, ನಿರಚನವಾದ ಮತ್ತು ಸಾಹಿತ್ಯ ವಿಮರ್ಶೆ -1, ನಿರಚನವಾದ ಮತ್ತು ಸಾಹಿತ್ಯ ವಿಮರ್ಶೆ-2, ನಿರಚನವಾದ ಎಂದರೇನು?, ಪುಸ್ತಕದ ಮುಗಿತಾಯವೂ, ಬರವಣಿಗೆಯ ಆರಂಭವೂ, ಡೆರಿಡಾನ ಜೀವನದ ಮುಖ್ಯ ಘಟನೆಗಳು ಹೀಗೆ ವಿವಿಧ ಆಧ್ಯಾಯಗಳಡಿ ಡೆರಿಡಾನ ವ್ಯಕ್ತಿತ್ವ-ಚಿಂತನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಮಾಧವ ಪೆರಾಜೆ ಎಂ.ಎ. ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯ, ಎಂ.ಫಿಲ್ ಹಾಗೂ ಪಿಎಚ್.ಡಿ. ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ದ್ರಾವಿಡ ಸಂಸ್ಕ್ರತಿ ಅಧ್ಯಯನ ವಿಭಾಗ ಅಧ್ಯಾಪಕರಾಗಿರುವ ಅವರು ಕನ್ನಡ ವಿಮರ್ಶೆ, ದೇಸಿ ಸಂಸ್ಕ್ರತಿ ಹಾಗೂ ದ್ರಾವಿಡ ಅಧ್ಯಯನ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ. ಕನ್ನಡ ಭಾಷಾ ಸಾಹಿತ್ಯ, ದ್ರಾವಿಡ ಅಧ್ಯಯನ , ಭಾಷಾ ವಿಜ್ಞಾನ, ಭಾಷಾಂತರ ಅಧ್ಯಯನ ಇವು ಪೆರಾಜೆ ಅವರ ಆಸಕ್ತಿಯ ಕ್ಷೇತ್ರಗಳು. ಪರಿಭಾಷೆ, ತೌಲನಿಕ ದ್ರಾವಿಡ, ಡೆರಿಡಾ, ಪಂಪ ಪೂರ್ವ ಕನ್ನಡ ಕವಿಗಳು, ಪ್ರಾಚೀನ ಕನ್ನಡ ಸಾಹಿತ್ಯವು ಅನುವಾದವೇ? ಇವು ಪ್ರಕಟಿತ ಕೃತಿಗಳು. ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ...
READ MORE