ಲೇಖಕ ಉದಯಕುಮಾರ ಹಬ್ಬು ಅವರ ಐತಿಹಾಸಿಕ ಕಾದಂಬರಿ- ʻದಾರಾ ಶುಕೋಹ್ ನ ಕನಸುಗಳುʼ. ಔರಂಗಜೇಬನ ಅಣ್ಣ ಷಹಜಹಾನನ ಮಗ ದಾರಾ ಶುಕೋಹ್.ರಾಜನಾದರೂ ಕವಿಯೂ ಆಗಿದ್ದ, ಸಂಸ್ಕೃತ ಕಲಿತು ಉಪನಿಷತ್ತುಗಳನ್ನು ಪರ್ಶಿಯನ್ ಭಾಷೆಗೆ ತುರ್ಜುಮೆ ಮಾಡಿ ಗ್ರಂಥಗಳನ್ನು ರಚಿಸಿದ್ದ. ಕನಸುಗಾರ ದಾರಾ ಶುಕೋಹ್‌ನ ಜೀವನ ಚರಿತ್ರೆಯ ಮಾಹಿತಿ ಒಳಗೊಂಡ ಕೃತಿ.
ಉದಯಕುಮಾರ್ ಹಬ್ಬು ಅವರ ದಾರಾ ಶುಕೋಹ್’ನ ಕನಸುಗಳು
ಕೆಲವು ವರ್ಷಗಳ ಹಿಂದೆ ಪ್ರದರ್ಶಿತವಾಗಿದ್ದ 'ದಾರಾ ಶಿಕೋವನ ಕನಸುಗಳು' ಎಂಬೊಂದು ನಾಟಕವನ್ನು ಬಿಟ್ಟರೆ, ದಾರಾಶಿಕೋವಾ/ಶುಕೋವ ರುಕೋಡ್ ಕುರಿತು ಕನ್ನಡದಲ್ಲಿ ಯಾವುದೇ ಸಾಹಿತ್ಯ ಕೃತಿ ಪ್ರಕಟವಾಗಿಲ್ಲದ ಹಿನ್ನೆಲೆಯಲ್ಲಿ ಮಿತ್ರ ಉದಯಕುಮಾರ್ ಹಬ್ಬುರವರ 'ದಾರಾ ಶುಕೋಪ್‌ನ ಕನಸುಗಳು' ಎಂಬ ಕಾದಂಬರಿ ಹಲವು ಅರ್ಥಗಳಿಂದ ಸಾಹಸದ ಪ್ರಯತ್ನ ಪರ್ಶಿಯನ್ ಭಾಷೆಯಲ್ಲಿರುವ ದಾರಾ ಶಿಕೋವನ ಹೆಸರನ್ನು ಹೇಗೆ ಉಚ್ಚರಿಸಬೇಕು ಎಂಬ ಕುರಿತು ಕೂಡಾ ಹಬ್ಬುರವರು ಬಹಳ ಸಂಶೋಧನೆ ನಡೆಸಿ, 'ಶುಕೋಹ್" ಎಂದು ಬಳಸಿದ್ದಾರೆ. ಈ ದಾರಾ ಶುಕೋಡ್ ಮೊಗಲ್ ಚಕ್ರವರ್ತಿ ಶಹಜಹಾನನ ಹಿರಿಯ ಪುತ್ರ, ಸಾಹಿತ್ಯ, ಸಂಗೀತ ಮತ್ತು ಆಧ್ಯಾತ್ಮದಲ್ಲಿ ವಿಶೇಷ ಆಸಕ್ತ ಇಸ್ಲಾಂನ ಸೂಫಿ ಆದರ್ಶಗಳನ್ನು ಹಿಂದುತ್ತದ ವೇದಾಂತ ಫಿಲಾಸಫಿಯೊಂದಿಗೆ ಸಮರಸಗೊಳಿಸಲು ಯತ್ನಿಸಿದ ಆದರ್ಶ ಜೀವಿ. ಮಜಾ-ಉಲ್ ಬಹೇನ್ (ಎರಡು ಸಮುದ್ರಗಳ ಸಂಗಮ) ಅವನು ರಚಿಸಿದ ಕೃತಿ. ಆತ ವಿದ್ವಾಂಸರ ನೆರವಿನಿಂದ ಐವತ್ತೆರಡು ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿ 'ಸಿರ್-ಯು-ಅಕಬರ್ (ದೊಡ್ಡರಹಸ) ಎಂಬ ಬೃಹತ್ ಗ್ರಂಥ ರಚನೆಗೆ ಕಾರಣನಾದ. ಕ್ರಿ.ಶ. 1615 - 1659 ನಡುವಣ ನಲವತ್ನಾಲ್ಕು ವರ್ಷ ಅವನ ಜೀವಿತಾವಧಿ, ಚಕ್ರವರ್ತಿಯ ಹಿರಿಯ ಮಗನಾದ ಕಾರಣ ಶಹಜಹಾನನ ನಂತರ ಆತನೇ ದೆಹಲಿಯ ಸಿಂಹಾಸನ ಏರಬೇಕಿತ್ತು. ಅದು ಸಾಧ್ಯವಾಗಲಿಲ್ಲವೇಕೆಂದರೆ, ದಾರಾ ಶುಕೋಹನ್ ತಮ್ಮ ಔರಂಗಜೇಬ್ 1658 ರಲ್ಲಿ ತಂದೆಯನ್ನು ಪದಚ್ಯುತಗೊಳಿಸಿ, ತಾನೇ ಸಿಂಹಾಸನ ಏರಿದ್ದ, ಅಣ್ಣನ ಕೊಲೆಮಾಡಿ, ತಂದೆಯನ್ನು ಸೆರೆಮನೆಗಟ್ಟಿದ್ದ. ಮಗಳು ಜಹಾನಾರಾಳೊಟ್ಟಿಗೆ ಏಳುವರೆ ವರ್ಷ ಜೈಲಿನಲ್ಲಿದ್ದ ಶಹಜಹಾನ್ 1666ರಲ್ಲಿ ಜೈಲಿನಲ್ಲೇ ತೀರಿಕೊಂಡ. 'ಅಸಹ್ಯಕರ ಎನ್ನಿಸುವಷ್ಟು ಹಿಂದೂ ವಿರೋಧಿಯೂ ಧಾರ್ಮಿಕ ದುರಭಿಮಾನಿಯೂ ಎನ್ನಿಸಿಕೊಂಡ' ಔರಂಗಜೇಬನ ಅಭಿಪ್ರಾಯದಂತೆ ದಾರಾ ಶುಕೋಹ ಮಾಡಿದ್ದ ಅಪರಾಧವೆಂದರೆ ಆತ 'ಹಿ೦ದೂ ಇಸ್ಲಾಂ ಧರ್ಮಗಳ ಸಮನ್ವಯವನ್ನು ಯತ್ನಿಸಿದ್ದು ಮತ್ತು ಎರಡು ಧರ್ಮಗಳ ಅಂತಿಮ ನೆಲೆ ಒಂದೇ ಎನ್ನುವುದನ್ನು ಸ್ಥಾಪಿಸಲು ಮುಂದಾದದ್ದು ಹಾಗೂ ಹಿಂದೂ ಪವಿತ್ರ ಗ್ರಂಥ (ಉಪನಿಷತ್ತುಗಳು, ಭಗವದ್ಗೀತೆ ಮತ್ತು ಯೋಗವಾಸಿಷ್ಠ) ಗಳನ್ನು ಪರ್ಷಿಯನ್ ಭಾಷೆಗೆ ಭಾಷಾಂತರ ಮಾಡಿದ್ದು'. ಇದಿಷ್ಟೂ ನಮಗೆ ಇತಿಹಾಸದ ಪಠ್ಯದಲ್ಲಿ ಸಿಗುವ ಸಂಗತಿ. ಹಬ್ಬುರವರು ಇದಕ್ಕೆ
ಪೂರಕವಾಗಬಲ್ಲ ಸಂಗತಿಗಳನ್ನು ಶ್ರದ್ಧೆಯಿಂದ ಕಲೆಹಾಕಿ, ಎಲ್ಲಿಯೂ ಐತಿಹಾಸಿಕ ವಿವರಗಳನ್ನು ಉಲ್ಲಂಘಿಸದ ಜವಾಬ್ದಾರಿಯಿಂದ ಈ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯ ಪ್ರವೇಶಕ್ಕೆ ಅನುಕೂಲವಾಗುವಂತಹ ಮುನ್ನುಡಿಯನ್ನು ಬರೆದಿರುವ ಆರ್. ವಿಜಯರಾಘವನ್ "ದಾರಾಶಿಕೋನನ್ನು ಔರಂಗಜೇಬ ಕೊಂದದ್ದು ಮಾನಸಿಕವಾಗಿ ಅವನು ತನ್ನ ತಂದೆಯ ಬಗ್ಗೆ ಹೊಂದಿದ್ದ ಸಿಟ್ಟಿಗಾಗಿ ಎಂದು ಇತಿಹಾಸವನ್ನು ಓದುವಾಗ ನಮಗೆ ಅನ್ನಿಸುವುದುಂಟು'' ಎಂದು ಹೇಳಿ ಇಲ್ಲಿನ ರಕ್ತಚರಿತ್ರೆಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವ ಸಾಧ್ಯತೆಯನ್ನು ನಮ್ಮ ಮುಂದಿಡುತ್ತಾರೆ. ಹಬ್ಬುರವರು ಇತಿಹಾಸವನ್ನು ನೋಡುವ ವಿಭಿನ್ನ ಬಗೆಯೇ ಗಮನಾರ್ಹವಾದುದು. ಔರಂಗಜೇಬನ ಆಡಳಿತದ ದುರಂತವನ್ನು ಅವರು ಬಹುತ್ವ ಸಂಸ್ಕೃತಿಯ ನಾಶ ಎಂದು ತರ್ಕಿಸುತ್ತಾರೆ. ಹಾಗೆ ನೋಡಿದರೆ, ಈ ಕಾದಂಬರಿಯಲ್ಲಿ ಹಬ್ಬುರವರು ಚರಿತ್ರೆಯ ಚೌಕಟ್ಟನ್ನು ಉಲ್ಲಂಘಿಸದೇ ದಾರಾ ಶಿಕೋನ ಬದುಕನ್ನು, ನಿಲುವನ್ನು, ದುರಂತವನ್ನು ಬಹಳ ಎಚ್ಚರಿಕೆಯಿಂದ ವಿಶ್ಲೇಷಿಸಿದ್ದಾರೆ. ಕಾದಂಬರಿಯ ಆರಂಭದಲ್ಲಿ ಅವರು ಹೇಳುವ ಮಾತು ತೂಕದ ವಿಶ್ಲೇಷಣೆಯ ಫಲಶ್ರುತಿಯಂತಿದೆ. ಒಂದು ವೇಳೆ ದಾರಾ ಸೋಲದಿರುತ್ತಿದ್ದರೆ, ಧರ್ಮಾಂದರು ಸೋಲುತ್ತಿದ್ದರು. ಮತ್ತು ಭಾರತವು ಉಪನಿಷತ್ತುಗಳನ್ನು ಅನುವಾದಿಸಿದ ಸಾಮ್ರಾಟನ ಅಡಿಯಲ್ಲಿ ಅರಳಿರುತ್ತಿತ್ತು." ಈ ಕಾದಂಬರಿಯ ಓದಿಗೆ ಪೂರಕವಾಗುವ ಒಂದು ಉಪಕಥೆಯನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸಿದೆ. ತೀನಂಶ್ರೀಯವರು ಭಾರತೀಯ ಕಾವ್ಯಮೀಮಾಂಸೆಯ ಆರನೆಯ ಅಧ್ಯಾಯದಲ್ಲಿ ವಾರಾಶಿಕೋನ ಸಮಕಾಲೀನ, ಅವನ ಮಾವ ಅಸಫಖಾನನ ಆಶ್ರಯದಲ್ಲಿದ್ದ ಜಗನ್ನಾಥ ಪಂಡಿತರಾಜನ ಕುರಿತು ಉಲ್ಲೇಖಿಸಿದ್ದಾರೆ. 'ರಸಗಂಗಾಧರ'ದ ಕರ್ತೃ, ಕವಿ, ಜಗನ್ನಾಥ ಪಂಡಿತರಾಜನು, ಸಂಸ್ಕೃತದ ಪ್ರಸಿದ್ಧ ಲಾಕ್ಷಣಿಕ. ಈತನು ಭಾಮಿನೀ ವಿಲಾಸ, ಜಗದಾಭರಣ, ಕರುಣಾ ಲಹರೀ, ಪೀಯೂಷ ಲಹರೀ ಮೊದಲಾದ ಸ್ತೋತ್ರಗಳನ್ನು ಅಸಫ ವಿಲಾಸ ಎಂಬ ಗದ್ಯ ಕಾವ್ಯವನ್ನೂ ರಚಿಸಿದ್ದ. ಈ ಪಂಡಿತರಾಜನು ಒಬ್ಬ ಯವನಸುಂದರಿಯನ್ನು ಮೆಚ್ಚಿ ವರಿಸಿದನೆಂದೂ ಇದಕ್ಕಾಗಿ ಕುಲದವರ ಬಹಿಷ್ಕಾರಕ್ಕೆ ಗುರಿಯಾದನೆಂದೂ ಬಳಿಕ ಕಾಶಿಯಲ್ಲಿ ಗಂಗಾಪ್ರವೇಶ ಮಾಡಿದನೆಂದೂ ಕಥೆಗಳುಂಟು.
(ಕೃಪೆ : ಪುಸ್ತಕಲೋಕ, ಬರಹ : ಬೆಳಗೋಡು ರಮೇಶ ಭಟ್)
©2024 Book Brahma Private Limited.