ಲೇಖಕ ಸಿದ್ದು ಯಾಪಲಪರವಿ ಕಾರಟಗಿ ಅವರ ಕೃತಿ ʻದಣಿವರಿಯದ ದಾರಿ...ʼ. ಪುಸ್ತಕದಲ್ಲಿ ಡಾ. ಆರ್.ಎಂ. ರಂಗನಾಥ ಅವರು ಪುಸ್ತಕದಲ್ಲಿ, “ಅರವತ್ತರ ದಶಕದಲ್ಲಿ ಹಿಂದುಳಿದ ಜನಾಂಗದ ಯುವಕರು ನೌಕರಿ ಮಾಡುವುದು ಕಷ್ಟಕರವಾಗಿತ್ತು. ಉನ್ನತ ಶಿಕ್ಷಣ ಪಡೆಯುವುದು ದುರ್ಲಭವೆನಿಸಿದ ಕಾಲವದು. ಧಾರವಾಡ ಜಿಲ್ಲೆಯ ಅತ್ಯಂತ ಹಿಂದುಳಿದ ಊರಿನ ಯುವಕನೊಬ್ಬ ಓದುವ ಹಟ ತೊಟ್ಟು ಉನ್ನತ ವ್ಯಾಸಂಗ ಪಡೆದದ್ದೇ ವಿಸ್ಮಯ ಆದರೆ ಅದರಾಚೆಗೆ ಮಾಡಿದ ಸಾಧನೆ ಅದ್ಭುತ ದಾಖಲೆ. ಕೇವಲ ಮಠಾಧೀಶರು ಮತ್ತು ಬೆರಳೆಣಿಕೆಯ ಮುಂದುವರಿದ ಜನಾಂಗದವರು ಶಿಕ್ಷಣ ಸಂಸ್ಥೆಗಳ ಪ್ರಾರಂಭ ಮಾಡುವ ಧೈರ್ಯ ಮಾಡುತ್ತಿದ್ದರು. ಅಂತಹ ಹೊತ್ತಿನಲ್ಲಿ, ಸ್ವಾಭಿಮಾನದ ಸಂಕೇತದಂತಿದ್ದ, ಹಿಂದುಳಿದ ಕುರುಬ ಜನಾಂಗದ ಐಕಾನ್ ಪ್ರೊ. ಬಿ.ಎಫ್. ದಂಡಿನ ಅವರು ಅಪರೂಪದ ಸಾಹಸಕ್ಕೆ ಕೈ ಹಾಕಿದ ಮೊಟ್ಟಮೊದಲ ಧೀಶಕ್ತಿ. ಕೇವಲ ತಮ್ಮ ಆತ್ಮಬಲದ ಆಧಾರದ ಮೇಲೆ ಇಂತಹ ಬಹುದೊಡ್ಡ ರಿಸ್ಕ್ ತೆಗೆದುಕೊಂಡದ್ದು ಯಾರೂ ಅರಿಯದ ಇತಿಹಾಸ. ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್ಟಲ್ಲ. ಅದಾವುದನ್ನು ಲೆಕ್ಕಿಸದೇ ಹಂತ ಹಂತವಾಗಿ, ಇತರರೊಂದಿಗೆ ಆರೋಗ್ಯಪೂರ್ಣ ಪೈಪೋಟಿಗಿಳಿದ ರೋಚಕ ಹೋರಾಟದ ಪ್ರತಿಫಲವೇ 'ದಣಿವರಿಯದ ದಾರಿ” ಎಂದು ಹೇಳಿದ್ದಾರೆ.
ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ. 1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ...
READ MORE