ವಿಜ್ಞಾನ ಇತಿಹಾಸದಲ್ಲಿ ಕ್ಲಾಡಿಯನ್ ಟಾಲೆಮಿಯ ಸ್ಥಾನ ಬಹಳ ಪ್ರಮುಖವಾದದ್ದು. ಟಾಲೆಮಿಯ ‘ಭೂಕೇಂದ್ರ ಸಿದ್ಧಾಂತ‘ ತಪ್ಪಿರಬಹುದು. ಆದರೆ ಕೊಪರ್ನಿಕಸ್ ‘ಸೌರಕೇಂದ್ರ ಸಿದ್ಧಾಂತ‘ವನ್ನು ಮಂಡಿಸಲು ಕಾರಣ ಟಾಲೆಮಿಯ ‘ಭೂಕೇಂದ್ರವಾದ‘ ಎನ್ನುವುದು ಸುಳ್ಳಲ್ಲ. ಇಂತಹ ವಿಜ್ಞಾನಿಯ ಬಾಲ್ಯ-ಜೀವನ-ಸಾಧನೆ ಕುರಿತು ಸಂಕ್ಷಿಪ್ತವಾಗಿ ತೆರೆದಿಟ್ಟಿದ್ದಾರೆ ಲೇಖಕಿ ಸುಂಗಲಾ ಎಸ್. ಮುಮ್ಮಿಗಟ್ಟಿ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿರುವ ಈ ಕೃತಿಯನ್ನು ನಾ. ಸೋಮೇಶ್ವರ ಸಂಪಾದಿಸಿದ್ದಾರೆ.
ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ಸುಮಂಗಲಾ ಅವರು ಈ ಪರಿಸರ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲದೇ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ ಪಡೆದಿದ್ದಾರೆ. ಜೈವಿಕ ವೈವಿಧ್ಯದ ಅತ್ಯುತ್ತಮ ಸಂವಹನಕ್ಕಾಗಿ ಲಂಡನ್ನಿನ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಯ ಮನ್ನಣೆ ಪಡೆದಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ಇವರು ವಿಜ್ಞಾನ ಕಾರ್ಯಕ್ರಮಗಳಿಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರು. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ನವಕರ್ನಾಟಕದ ವಿಜ್ಞಾನ ಸರಳ ಪರಿಚಯ ಮಾಲಿಕೆಯ ಸಂಪಾದಕರಲ್ಲಿ ಒಬ್ಬರು. ಇವರ ಹಲವಾರು ಪುಸ್ತಕ- ಲೇಖನ ...
READ MORE