ಬ್ರಿಟಿಶ್ ಭಾರತದ ಒಂದು ಮಿಲಿಟರಿ ನಗರವನ್ನು 1931ರಲ್ಲಿ ಹಲವು ದಿನಗಳ ಕಾಲ ಡೇರ್ ಡೆವಿಲ್ ದಂಗೆಯ ಮೂಲಕ ವಶಪಡಿಸಿಕೊಂಡಿದ್ದ ಚಿತ್ತಗಾಂಗ್ ದಂಗೆ ಪ್ರಖ್ಯಾತವಾದದ್ದು.ಅದು ಬ್ರಿಟಿಷ್ ಸರಕಾರವನ್ನು ನಡುಗಿಸಿತ್ತು. ಬಂಗಾಳಿ ಪ್ರತಿಷ್ಟಿತ ಕುಟುಂಬದ ಹದಿನಾರು ವರ್ಷದ ಬಾಲಕನಾಗಿ ಇದರಲ್ಲಿ ಭಾಗವಹಿಸಿ ಅಂಡಮಾನ್ ಕರಿನೀರಿನ ಶಿಕ್ಷೆಗೆ ಒಳಗಾದ ಅತಿ ಚಿಕ್ಕ ವಯಸ್ಸಿನ ಕೈದಿಯಾಗಿದ್ದ ಸುಬೋಧ ರಾಯ್ ಅವರ ಚಿತ್ತಗಾಂಗ್ ದಂಗೆಯಲ್ಲಿ ಭಾಗವಹಿಸಿದ್ದ ನೆನಪುಗಳಿ ಇಲ್ಲಿವೆ. ಆಮೇಲೆ ಅಂಡಮಾನ್ ಜೈಲಿನಲ್ಲಿ ಹಲವು ವರ್ಷಗಳ ಕಾಲ ಕೈದಿಯಾಗಿ ಅಲ್ಲೇ ಕಮ್ಯುನಿಸಂನತ್ತ ಆಕರ್ಷಿತರಾಗಿ ವಾಪಸ್ಸು ಬಂಗಾಳಕ್ಕೆ ಬಂದ ಮೇಲೆ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿ ತಮ್ಮ ಜೀವನವನ್ನೇ ದುಡಿಯುವ ವರ್ಗದ ಚಳುವಳಿಗೆ ಮುಡಿಪಾಗಿಸಿದ ಅವರ ಮೈನವಿರೇಳಿಸುವ ಕಥಾನಕ ಇಲ್ಲಿದೆ.
ವಿಶ್ವ ಕುಂದಾಪುರ ಅವರು ವಿದ್ಯಾರ್ಥಿ ದಿನಗಳಿಂದಲೂ ಪ್ರಗತಿಪರ ಆಂದೋಲನದಲ್ಲಿ ಗುರುತಿಸಿಕೊಂಡವರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು 'ದಿ ಹಿಂದೂ’ ಇಂಗ್ಲಿಷ್ ದೈನಿಕದ ಪ್ರಧಾನ ವರದಿಗಾರರಾಗಿ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ’ಸಮತೆಯ ನಾಡಿನ ಉದಯಕ್ಕಾಗಿ’ (ಹರಿಕಿಷನ್ ಸಿಂಗ್ ಸುರ್ಜಿತ್), ವಿಮೋಚನೆಯ ಸಮರದಲ್ಲಿ (ಮೇಜರ್ ಜೈಪಾಲ್ ಸಿಂಗ್), ’ಮಾವೋವಾದ: ಒಂದು ಎಡಪಂಥೀಯ ವಿಶ್ಲೇಷಣೆ' (ವಿವಿಧ ಲೇಖಕರು), `ಚಿತ್ತಗಾಂಗ್ ಶಸ್ತ್ರಾಗಾರ ದಾಳಿ' (ಸುಜೂದ್ ರಾಮ್ ) ಅವರ ಕೆಲವು ಪ್ರಮುಖ ಅನುವಾದ ಕೃತಿಗಳು. ಅವರ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ’ ಪ್ರಬಂಧವು ಕನ್ನಡದಲ್ಲಿ ಅಪರೂಪದ ಕೃತಿ. `ವಿಮೋಚನೆಯ ಸಮರ’ದಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2009ನೇ ಸಾಲಿನ ಅತ್ಯುತ್ತಮ ...
READ MORE