‘ಚಿತ್ರಕಲಾವಿದ ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು’ ಕಲಾವಿದ, ಲೇಖಕ ಬಸವರಾಜ ಎಸ್. ಕಲೆಗಾರ ರಚಿಸಿದ್ದಾರೆ. ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಅಜ್ಞಾತವಾಗಿ ಉಳಿದಿರುವ ಸಂಗಣ್ಣ ಮಲಗೊಂಡ ದೋರನಹಳ್ಳಿ ಅವರ ಜೀವನ ಮತ್ತು ಕಲಾ ಸಂವೇದನೆಯನ್ನು ಈ ಗ್ರಂಥದ ಮೂಲಕ ಅನಾವರಣಗೊಳಿಸಲಾಗಿದೆ.
ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...
READ MORE