`ಛತ್ರಸಾಲ್' ಜೀವನಚರಿತ್ರೆಯ ಕೃತಿ ಇದು. ಲೇಖಕಿ ಪದ್ಮಾ ಶೆಣೈ ಅವರು ರಚಿಸಿದ್ದಾರೆ. ಔರಂಗಜೇಬನ ಆಡಳಿತದಲ್ಲಿ ತಮ್ಮ ಧರ್ಮವನ್ನು ಅನುಸರಿಸಲು ಸ್ವಾತಂತ್ರ್ಯವಿಲ್ಲದೆ ನರಳುತ್ತಿದ್ದ ಹಿಂದೂಗಳಿಗೆ ರಕ್ಷಕನಾದ ವೀರ ಅರಸ. ಹದಿನಾಲ್ಕನೆ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಛತ್ರಸಾಲ, ಎಪ್ಪತ್ತು ವರ್ಷಗಳ ಕಾಲ ಆತ್ಮ ಗೌರವಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಂದು ಛತ್ರಸಾಲ್ ಕುರಿತಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಛತ್ರಸಾಲ್ ಬಾಲ್ಯ ಜೀವನ, ಹಿಂದೂಗಳ ಜೊತೆಗಿನ ಅವಿನಾಭಾವ ಸಂಬಂಧ, ಧರ್ಮರಕ್ಷಣೆಯ ಇತಿಹಾಸ, ರಾಜ್ಯಾಡಳಿತದ ವೈಖರಿ ಹೀಗೆ ಛತ್ರಸಾಲ್ ಜೀವನದ ವಿವಿಧ ಆಯಾಮಗಳನ್ನು ಲೇಖಕರು ಈ ಪುಸ್ತಕದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.
ಚಿಂತನ, ಕಥೆ, ಕಾದಂಬರಿ, ಲೇಖನ, ಪ್ರಬಂಧ ಮುಂತಾದ ವೈವಿಧ್ಯಮಯ ಪ್ರಕಾರಗಳಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಪದ್ಮಾ ಶೆಣೈಅವರು 1933 ನವೆಂಬರ್ 03 ರಂದು ಚೆನ್ನೈನಲ್ಲಿ ಜನಿಸಿದರು. ಮನುಷ್ಯರು ಬೆಳೆಸಿಕೊಂಡಿರುವ ಸಂಸ್ತೃತಿ, ನಂಬಿಕೆ, ಬದಲಾಗುತ್ತಿರುವ ಜೀವನ ಮೌಲ್ಯಗಳು, ಸಂಘರ್ಷ, ಮಾನಸಿಕ ದ್ವಂದ್ವಗಳು ಇವುಗಳನ್ನೇ ತಮ್ಮ ಕಥಾವಸ್ತುವಿನಲ್ಲಿ ಆರಿಸಿಕೊಂಡು ಜನಪ್ರಿಯ ಲೇಖಕಿ ಎನಿಸಿದ್ದಾರೆ ಪದ್ಮಾ ಶೆಣೈ. ತಂದೆಯಿಂದಲೇ ಎಳೆ ವಯಸ್ಸಿನಲ್ಲಿಯೇ ‘ಗಾಸ್ಪೆಲ್ ಆಫ್ ರಾಮಕೃಷ್ಣ’ ಓದಿದ್ದರ ಜೊತೆಗೆ ತಂದೆಯ ಸಂಗ್ರಹದಲ್ಲಿದ್ದ ಇಂಗ್ಲಿಷ್ ಲೇಖಕರಾದ ಡೇಲ್ ಕಾರ್ನಿಜ್, ಜಿಮ್ ಕಾರ್ಬೆಟ್ ಮುಂತಾದವರ ಕೃತಿಗಳನ್ನಲ್ಲದೆ ರವೀಂದ್ರನಾಥ ಠಾಕೂರ್, ಬಂಕಿಮ ಚಂದ್ರ ಚಟರ್ಜಿ, ...
READ MORE