ಸಿ.ಎನ್. ರಾಮಚಂದ್ರನ್

Author : ಸಿ. ನಾಗಣ್ಣ

Pages 128

₹ 100.00

Buy Now


Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001

Synopsys

‘ಸಿ.ಎನ್. ರಾಮಚಂದ್ರನ್’ ನವಕರ್ನಾಟಕದ ಸಾಹಿತ್ಯ ಸಂಪದ- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬದುಕು-ಬರೆಹ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಲೇಖಕ, ಡಾ. ಸಿ. ನಾಗಣ್ಣ ಈ ಕೃತಿ ರಚಿಸಿದ್ದಾರೆ. ತಮ್ಮ ಅಖ್ಯಾನ-ವ್ಯಾಖ್ಯಾನ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿಕೊಂಡವರು ‘ಸಿ.ಎನ್. ರಾಮಚಂದ್ರನ್’ ಈ ಕೃತಿಯು ಅವರ ಬದುಕು-ಬರೆಹಗಳ ವಿವರಗಳನ್ನೊಳಗೊಂಡಿದೆ. ನಾಡಿನ ವಿದ್ವಾಂಸರಲ್ಲೊಬ್ಬರಾಗಿರುವ ರಾಮಚಂದ್ರನ್, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಹೆಚ್ಚಾಗಿ ವಿದೇಶದಲ್ಲಿದ್ದು ತಮ್ಮ ಉದ್ಯೋಗದಲ್ಲಿ ನಿರತರಾಗಿದ್ದರೂ ಕನ್ನಡವನ್ನು ಮರೆತವರಲ್ಲ. ವಿದೇಶಿ ನೆಲದಲ್ಲಿಯ ಅಧ್ಯಾಪನ, ಅಧ್ಯಯನಗಳ ಹಿನ್ನೆಲೆಯಲ್ಲಿ, ನಾಡಿನ ಮೌಖಿಕ ಮಹಾಕಾವ್ಯಗಳನ್ನೂ ತೌಲನಿಕವಾಗಿ ಅಭ್ಯಸಿಸಿದ್ದಾರೆ. ಈ ಕೃತಿಯು ಅವರ ಎಲ್ಲ ಬಗೆಯ ಬರೆಹಗಳನ್ನು ಒಂದೊಂದಾಗಿ ವಿಶ್ಲೇಷಿಸಿ ಸಮಗ್ರ ಪರಿಚಯ ಮಾಡಿಸುತ್ತದೆ. ನಿರೂಪಣಾ ಶೈಲಿಯೂ ಅಷ್ಟೇ ಮಹತ್ವದ್ದಾಗಿದೆ.

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books