`ಭೂಜಲಭಗೀರಥ ಬಿ.ಪಿ.ರಾಧಾಕೃಷ್ಣ’ ಕೃತಿಯು ಟಿ.ಎಂ. ಶಿವಶಂಕರ್ ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಕೃತಿಯ ಮುನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಡಾ. ಪಿ. ರಾಧಾಕೃಷ್ಣ ಅವರು ಭೂವಿಜ್ಞಾನ ಮತ್ತು ಅಂತರ್ಜಲ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆ ಅಪ್ರತಿಮವಾದುದು. ಕರ್ನಾಟಕದ ಉದ್ದಗಲ ಸಂಚರಿಸಿ ಅನೇಕ ಜಿಲ್ಲೆಗಳ ಭೂಗರ್ಭದಲ್ಲಿರುವ ಅಮೂಲ್ಯ ಖನಿಜ ಸಂಪತ್ತನ್ನು ಶೋಧಿಸಿ, ಸರ್ವೆ ಮಾಡಿ ನಿಖರ ಮಾಹಿತಿ ನೀಡಿದ ಅಪರೂಪದ ವಿಜ್ಞಾನಿ. ಬಹುಮುಖ ಪ್ರತಿಭೆಯ ರಾಧಾಕೃಷ್ಣರವರು ವಿಜ್ಞಾನಿ, ಪರಿಸರವಾದಿ, ಭೂಗರ್ಭ ಶಾಸ್ತ ಅತ್ಯುತ್ತಮ ಆಡಳಿತಗಾರ, ವಿಜ್ಞಾನ ಲೇಖಕ, ಜೀವನ ಚರಿತ್ರಕಾರ, ಪತ್ರಿಕೆ ಸಂಪಾದಕ, ಸಾಮಾಜಿಕ ಚಿಂತಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮೂರು ಬಾರಿ ಪ್ರಶಸ್ತಿ ಪುರಸ್ಕೃತರು. ಗೌರವ ಡಾಕ್ಟರೇಟ್, ಹಲವು ದೇಶ, ರಾಜ್ಯ, ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಕ್ಕೆ ಪಾತ್ರರಾದವರು. ಎಲ್ಲಕ್ಕಿಂತ ಮಿಗಿಲಾಗಿ 'ಪದ್ಮಶ್ರೀ' ಪ್ರಶಸ್ತಿ ಪುರಸ್ಕೃತರು. ಕೋಲಾರದಲ್ಲಿ ದೊರೆತ ಅಪರೂಪದ ಖನಿಜವೊಂದಕ್ಕೆ ರಷ್ಯದ ಭೂವಿಜ್ಞಾನಿಗಳು 'ರಾಧಾಕೃಷ್ಣೈಟ್' ಹೆಸರು ನೀಡಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ನಿಷ್ಠುರ ಸ್ವಭಾವದ, ದಾಕ್ಷಿಣ್ಯಪರರಲ್ಲದ, ಸಮಯಪ್ರಜ್ಞೆಯುಳ್ಳ ಇವರು ಭೂವಿಜ್ಞಾನ ಇಲಾಖೆಯ ಮೂಲಕ ರಾಜ್ಯದ ಬೊಕ್ಕಸಕ್ಕೆ ನೀಡಿದ ಸಂಪತ್ತು ಬಹು ದೊಡ್ಡದು, ಹಾಗೆಯೇ ಅಂತರ್ಜಲ ಸಂರಕ್ಷಣೆಯಲ್ಲಿ ಅವರ ದೂರದೃಷ್ಟಿ ಯಾವತ್ತಿಗೂ ಮಾದರಿ, ಅನುಕರಣೀಯ. ಇವರನ್ನು ಕುರಿತು ಅಂತರ್ಜಲ ಸಲಹೆಗಾರ, ಭೂವಿಜ್ಞಾನಿ ಮತ್ತು ಲೇಖಕರಾದ ಟಿ.ಎಂ. ಶಿವಶಂಕರ್ ರಚಿಸಿರುವ 'ಭೂಜಲಭಗೀರಥ ಬಿ.ಪಿ. ರಾಧಾಕೃಷ್ಣ' ಕೃತಿ ಸಮಗ್ರವೂ ಅನುಕರಣೀಯವೂ ಆಗಿದೆ ಎಂದಿದೆ.
ಟಿ.ಎಂ. ಶಿವಶಂಕರ್ ಅವರು ಬಿ.ಎಸ್ಸಿ. ಪದವೀಧರರಾಗಿದ್ದು, ಮಾನಸಗಂಗೋತ್ರಿಯಲ್ಲಿಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಹಾಯಕ ವಿಜ್ಞಾನಿಯಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿರಿಯ ಭೂವಿಜ್ಞಾನಿಯಾಗಿ ನಿವೃತ್ತರಾಗಿದ್ದಾರೆ. ತಮ್ಮ ಇಡೀ ಸೇವಾವಧಿಯನ್ನು ಅಂತರ್ಜಲ ಶೋಧನಾ ವಿಭಾಗದಲ್ಲಿಯೇ ಕಳೆದು, ಅಂತರ್ಜಲದ ಬಗ್ಗೆ ವಿಶೇಷ ಜ್ಞಾನ ಪಡೆದಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹವ್ಯಾಸಿ ಬರಹಗಾರರಾಗಿದ್ದಾರೆ. ಇವರ ಬಹಳಷ್ಟು ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...
READ MORE