ಲೇಖಕ ಬಸವರಾಜ ಡೋಣೂರ ಅವರು ಎ.ಎನ್.ಮೂರ್ತಿರಾವ್ ಅವರ ಬಗೆಗೆ ಬರೆದ ಜೀವನ ಚಿತ್ರ ‘ಭಾರತೀಯ ಸಾಹಿತ್ಯ ನಿರ್ಮಾಪಕರು ಎ.ಎನ್.ಮೂರ್ತಿರಾವ್ ’. ಕೃತಿಯಲ್ಲೇ ಲೇಖಕರೇ ಬರೆದಿರುವಂತೆ, ಎ.ಎನ್.ಮೂರ್ತಿರಾವ್ ಕನ್ನಡದ ನವೋದಯ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ತಮ್ಮ ಸುದೀರ್ಘ ಜೀವನದಲ್ಲಿ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಉತ್ಕೃಷ್ಟ ಕೃತಿಗಳನ್ನು ಪ್ರಕಟಿಸಿ, ತಮ್ಮದೇ ಆದ ಓದುಗ ವರ್ಗವನ್ನು ನಿರ್ಮಿಸಿಕೊಂಡವರು ಎಂಬುದಾಗಿ ಹೇಳಿದ್ದಾರೆ. ಕೃತಿಯಲ್ಲಿ ಎ.ಎನ್.ಮೂರ್ತಿರಾವ್ ಅವರ ಬದುಕು ಮತ್ತು ಬರಹ, ಲೇಖಕರಾಗಿ ಮೂರ್ತಿರಾವ್ ಹಾಗೂ ಅವರ ಹಲವು ಕೃತಿಗಳನ್ನು ಪರಿಚಯಿಸಲಾಗಿದೆ.
ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು. 1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...
READ MORE