ಲೇಖಕ ಶಿರೀಷ ಜೋಶಿ ಅವರ ಕೃತಿ-ಭಾರತರತ್ನ ಭೀಮಣ್ಣ. ಸಂಗೀತ ರತ್ನ -ಭಾರತರತ್ನ ಪ್ರಶಸ್ತಿ ಪುರಸ್ಕೃತ ಡಾ. ಭೀಮಸೇನ ಜೋಶಿ ಅವರ ಬದುಕು-ಸಂಗೀತ ಸಾಧನೆಯ ಎತ್ತರಗಳನ್ನು ಪರಿಚಯಿಸುವ ಕೃತಿ ಇದು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರಾದ ಭೀಮಸೇನ ಜೋಶಿ ಅವರು ಬಾಲ್ಯದಿಂದಲೇ ಸಂಗೀತದ ಹುಚ್ಚು ಹಚ್ಚಿಕೊಂಡು, ಉತ್ತರ ಭಾರತದ ವಿವಿಧೆಡೆಯೂ ಸಂಚರಿಸಿ, ಗುರುಗಳನ್ನು ಹುಡುಕಾಡಿ ಸಂಗೀತ ಕಲಿತರು. ನಂತರ ಅವರು ಮುಂಬೈನಲ್ಲಿ ಕಾಯಂ ಆಗಿ ನೆಲೆಸಿ, ಭಾರತದಾದ್ಯಂತ ಸಂಗೀತ ಕ್ಷೇತ್ರವನ್ನು ಆಸಕ್ತರಿಗೆ ಆತ್ಮೀಯವಾಗಿಸಿದ್ದರು. ಇಂದಿಗೂ ಅವರ ಗಾಯನ ಕೇಳವ ಆಸಕ್ತರು ಅಸಂಖ್ಯ. ಇಂತಹ ಸಂಗತಿಗಳ ಕುರಿತು ಚಿತ್ರಣ ನೀಡುವ ಕೃತಿ ಇದು.
ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರೀಷ ಜೋಶಿ ಅವರು ಸಂಗೀತಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರೆಯುವ ಕೆಲವೇ ಲೇಖಕರಲ್ಲಿ ಒಬ್ಬರು. ಬೆಳಗಾವಿ ನಿವಾಸಿ ಆಗಿರುವ ಶಿರೀಷ ಅವರು ಸಾಹಿತ್ಯ, ಸಂಗೀತ, ನಾಟಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತದ ಪ್ರೀತಿ ಅವರಿಂದ ಹಲವು ಪುಸ್ತಕಗಳನ್ನು ಬರೆಸಿದೆ. ಕೃತಿಗಳು: ಕುಮಾರ ಗಂಧರ್ವ, ಬಸವರಾಜ ರಾಜಗುರು, ಕರ್ನಾಟಕದ ಗಂಧರ್ವರು, ಸಂಗೀತ ಲೋಕದ ರಸನಿಮಿಷಗಳು, ಕುಮಾರ ಸಂಗೀತ ...
READ MORE