ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಜೀವನ -ಸಾಧನೆ ಕುರಿತು ಲೇಖಕ ಡಿ.ಎಸ್. ಜಯಪ್ಪಗೌಡ ಬರೆದ ಕೃತಿ ಇದು. ವಿಶ್ವೇಶ್ವರಯ್ಯ ಅವರ ಬದುಕು ತುಂಬಾ ಶಿಸ್ತೀಯ ಬದುಕು. ಕರ್ತವ್ಯ ದಕ್ಷತೆ ಎಂದರೆ ಅವರಿಂದ ಕಲಿಯಬೇಕು. ವ್ಯಕ್ತಿಗತ ಜೀವನದ ಅನುಭವಗಳನ್ನು ಸಾರ್ವಜನಿಕವಾಗಿ ವಿಲೀನಗೊಳಿಸದೇ ಜೀವನ ನೆಮ್ಮದಿಯನ್ನು ಕಂಡುಕೊಳ್ಳುವುದು ಅವರ ಜೀವನ ವಿಧಾನವೇ ಆಗಿತ್ತು. ಇಂತಹ ಜೀವನಗಾಥೆಯ ಕುರಿತು ಈ ಕೃತಿಯು ವಿಸ್ತೃತವಾದ ಸುಳಿವು-ಹೊಳವುಗಳನ್ನು ನೀಡುತ್ತದೆ.
ಡಾ. ಡಿ.ಎಸ್. ಜಯಪ್ಪಗೌಡ ಮೂಲತಃ ಮೈಸೂರಿನವರು. ಮಾನವ ಭೂಗೋಳಶಾಸ್ತ್ರ ಒಂದು ಪರಿಚಯ, ನವಭಾರತದ ಬುನಾದಿ, ಸಾಮಾಜಿಕ ಅಧ್ಯಯನಗಳು ಹಾಗೂ ಕರ್ನಾಟಕ ಜಿಲ್ಲಾ ಪರಿಷತ್ತುಗಳ ತಾಲ್ಲೂಕು ಸಮಿತಿಗಳ ಮಂಡಲ ಪಂಚಾಯಿತಿಗಳ ಅಧಿನಿಯಮ 1983-ಇವು ಇಂಗ್ಲಿಷ್ ನಿಂದ ಪ್ರಮುಖ ಅನುವಾದಿತ ಕೃತಿಗಳು. ಪ್ರಶಸ್ತಿಗಳು: ರಾಜ್ಯ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ ಹಾಗೂ ಧಾರವಾಡ ವಿದ್ಯಾವರ್ಧಕ ಸಂಘ ಸಂಶೋಧನ ಪ್ರಶಸ್ತಿ ಲಭಿಸಿವೆ. ...
READ MORE