ಭಾಲಚಂದ್ರ ಜಯಶೆಟ್ಟಿ ಅವರು ಕನ್ನಡ ಹಾಗೂ ಹಿಂದಿ ಭಾಷಾ ತಜ್ಞರು. ನಿವೃತ್ತ ಪ್ರಾಂಶುಪಾಲರು. ಉತ್ತಮ ಅನುವಾದಕರು. 20ಕ್ಕೂ ಹೆಚ್ಚು ಕೃತಿಗಳು ಹಾಗೂ 10ಕ್ಕೂ ಹೆಚ್ಚು ಅನುವಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಬಿ.ಎಂ. ಶ್ರೀಕಂಠಯ್ಯನವರ ’ಭಾರತೀಯ ಕಾವ್ಯ ಮೀಮಾಂಸೆ’ ಕೃತಿಯನ್ನು ಹಿಂದಿಗೆ ಅನುವಾದಿಸಿ (1994) ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದರು. 1998ರಲ್ಲಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಇವರ ಬದುಕು ಬರೆಹ ಕುರಿತು ಲೇಖಕ ಸಂಗಮನಾಥ ರೇವತಗಾಂವ್ ಅವರು ಬರೆದಿದ್ದಾರೆ.
ಸದ್ಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿರುವ ಸಂಗಮನಾಥ ರೇವತಗಾಂವ್ ಅವರು ಬರವಣಿಗೆ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಆರು ಪುಸ್ತಕಗಳು ಪ್ರಕಟವಾಗಿವೆ. ಅನೇಕ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಬಿ.ಕಾಂ. ಪದವೀಧರರಾದ ಅವರು ಮೂಲತಃ ಕಲಬುರಗಿಯವರು.ಸಂಗಮನಾಥನ ಆಧುನಿಕ ವಚನಗಳು, ಬಾಲಚಂದ್ರ ಜಯಶೆಟ್ಟಿ, ಶಾಲಾ-ಕಾಲೇಜುಗಳಲ್ಲಿ ಗ್ರಂಥಾಲಯ, ಕಲಬುರಗಿ ತಾಲೂಕು ದರ್ಶನ ಇವರ ಕೃತಿಗಳು. ...
READ MORE