ಸಿ.ಕೆ.ವೆಂಕಟರಾಮಯ್ಯ ಅವರು ಕೃತಿ-ಭಾಸ ಮಹಾಕವಿ. 1928ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾಸ ಮಹಾಕವಿಯ ಕುರಿತು ಹಾಗೂ ಬೆಂಗಳೂರಿನ ಮಿಥಿಕ್ ಸೊಸೈಟಿ ಸಹ ಭಾಸ ಕವಿಯ ಬಗ್ಗೆ ಉಪನ್ಯಾಸ ನೀಡಲು ಕೇಳಿಕೊಂಡಿದ್ದೇ ಕೃತಿ ಬರೆಯಲು ಪ್ರೇರಣೆ ಸಿಕ್ಕಿತ್ತು ಎಂಬುದು ಲೇಖಕರ ಅಭಿಪ್ರಾಯ.
ಕೃತಿಯ ವಿಷಯವನ್ನು ಹಲವು ವಿಭಾಗಗಳಲ್ಲಿ ಮಂಡಿಸಿದ್ದು, ಮೊದಲ ವಿಭಾಗದಲ್ಲಿ ಕವಿಯ ಕಾಲ-ದೇಶ, 2ನೇ ಭಾಗದಲ್ಲಿ ರಾಮಾಯಣ ಸಂಬಂಧಿ ರೂಪಕಗಳು-ಪ್ರತಿಮಾ ನಾಟಕ ಹಾಗೂ ಅಭಿಷೇಕ ನಾಟಕ, 3ನೇ ವಿಭಾಗದಲ್ಲಿ ಉದಯನ ಸಂಬಂಧಿ ರೂಪಕಗಳು-ಪ್ರತಿಜ್ಞಾ ಯೌಗಂಧರಾಯಣ ಹಾಗೂ ಸ್ವಪ್ನ ವಾಸವದತ್ತ, 4ನೇ ಭಾಗದಲ್ಲಿ ಮಹಾಭಾರತ ಸಂಬಂಧಿ ರೂಪಕಗಳು-ಕರ್ಣ ಭಾರ, ಊರು ಭಂಗ ಇತ್ಯಾದಿ, 5ನೇ ಭಾಗದಲ್ಲಿ-ಕವಿಕಲ್ಪಿತ ಕಥಾವಸ್ತುವುಳ್ಳ ರೂಪಕಗಳು-ಚಾರುದತ್ತ ಹಾಗೂ ಆವಿಮಾರಕ, 6ನೇ ಭಾಗದಲ್ಲಿ ಶ್ರೀಕೃಷ್ಣ ಲೀಲಾ ಸಂಬಂಧಿ ರೂಪಕ ಹಾಗೂ 7ನೇ ಭಾಗದಲ್ಲಿ ರಚನಾ ವಿನ್ಯಾಸ ಹಾಗೂ ಶೈಲಿ ಇತ್ಯಾದಿ ವಿಚಾರಗಳು ಚರ್ಚೆಗೆ ಒಳಪಡಿಸಲಾಗಿದೆ.
ಚನ್ನಪಟ್ಟಣ ತಾಲೂಕಿನ ಪೊಟ್ಳು ಗ್ರಾಮದಲ್ಲಿ 1896ರ ಡಿಸೆಂಬರ್ 10 ರಂದು ಜನಿಸಿದ ಸಿ.ಕೆ.ವೆಂಕಟರಾಮಯ್ಯ ಅವರು ತಂದೆ ಕೃಷ್ಣಪ್ಪ ; ತಾಯಿ ನಂಜಮ್ಮ.ಅವರ ಪುತ್ರರು. ಚನ್ನಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ. ಪದವಿ, ಮುಂಬಯಿಯಲ್ಲಿ ಎಂ.ಎ, ಹಾಗೂ ಎಲ್.ಎಲ್.ಬಿ ಪದವಿ ಪಡೆದರು. ಶ್ರೀರಂಗಪಟ್ಟಣದಲ್ಲಿ ವಕೀಲಿ ವೃತ್ತಿ, ನಂತರ ಮೈಸೂರು ಸರಕಾರದ ಭಾಷಾಂತರ ಇಲಾಖೆಯಲ್ಲಿ ಸೇವೆ, ತದನಂತರ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಮೊದಲ ನಿರ್ದೇಶಕರಾದರು. ಕಥಾಸಂಕಲನ: ಹಳ್ಳಿಯ ಕಥೆಗಳು, ತುರಾಯಿ ನಾಟಕ: ಸುಂದರಿ, ನಚಿಕೇತ, ಮಂಡೋದರಿ, ನಮ್ಮ ಸಮಾಜ, ಬ್ರಹ್ಮವಾದಿ, ಮತ್ತು ಭಾಸ ಹಾಗೂ ಕಾಳಿದಾಸರ ಕೃತಿಗಳ ಬಗೆಗೆ ವಿಮರ್ಶೆ ಬರೆದಿದ್ದಾರೆ. ಬುದ್ಧ, ಪೈಗಂಬರ, ಲಿಂಕನ್, ...
READ MORE