ನಿಧಾನವಾಗಿ ಅಂಧತ್ವದೆಡೆಗೆ ಜಾರುತ್ತಿರುವ ಮನುಷ್ಯನೊಬ್ಬನ ನೈಜ ಕಥೆ ಎಂಬ ಉಪಶೀರ್ಷಿಕೆಯೊಡನಿರುವ ‘ಬೆಳಕು ನಂದಿದಾಗ’ ಎಂಬುದು ಮೂಲದಲ್ಲಿ ಎಲ್. ಸುಬ್ರಮಣಿ ಅವರ ಕೃತಿ. ಡಾ. ಎಂ.ಎಸ್.ಎಸ್. ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಾನು ಕೂಡ ಇತರರಂತೆ ಸಾಮಾನ್ಯ ಜೀವನ ನಡೆಸಲು ಪ್ರಯತ್ನಿಸುವಾಗ ಎದುರಿಸಬೇಕಾದ ಹೋರಾಟಗಳನ್ನು ಒಳಗೊಂಡ ಸ್ಪೂರ್ತಿದಾಯಕ ಕೃತಿ ಇದು. ಕ್ರಮೇಣ ಆವರಿಸುತ್ತಿರುವ, ಗುಣವಾಗದ, ಆತ್ಮವಿಶ್ವಾಸವನ್ನೇ ದುರ್ಬಲಗೊಳಿಸುವ ಈ ಅಂಧತ್ವ, ದೃಷ್ಟಿ ನಾಶದ ಪರಿಣಾಮಗಳು ಹಾಗೂ ಅವುಗಳನ್ನು ಅವರು ಹೇಗೆ ನಿಭಾಯಿಸಿದರು ಮುಂತಾದ ವಿಷಯಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. Retinitis Pigmentosa ಎಂಬ ಕಣ್ಣಿನ ಬೇನೆಯ ಲಕ್ಷಣವೆಂದರೆ ಬಹುಮಂದಿ ರೋಗಿಗಳಲ್ಲಿ ಇದರಿಂದ ಇದ್ದಕ್ಕಿದ್ದಂತೆ ದೃಷ್ಟಿ ನಾಶವಾಗಿ, ಅದರ ಪರಿಣಾಮದಿಂದ ವ್ಯಕ್ತಿಗಳು ಸೊರಗುತ್ತಾರೆ. ಸಾಮಾನ್ಯ ಜೀವನ ನಡೆಸುವಾಗಿನ ಅವರ ಬವಣೆಗಳನ್ನು ಈ ಕೃತಿ ವಿವರಿಸುತ್ತದೆ. ಕಷ್ಟಗಳನ್ನು ನಿರ್ವಹಿಸುವ, ಎದುರಿಸುವ ಧೈರ್ಯ, ಸ್ಪೂರ್ತಿ ನೀಡುತ್ತದೆ.
ವಿಜ್ಞಾನಿ ಎಂ.ಎಸ್.ಎಸ್. ಮೂರ್ತಿ ಅವರು 16-08-1929ರಂದು ಜನಿಸಿದ ಲೇಖಕರು ಸಹ.ಮುಂಬೈಯ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ 40 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರು. ರೇಡಿಯೇಶನ್ ಬಯೋಫಿಜಿಕ್ಸ್ ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಕ್ಯಾನ್ಸರ್ ಸೇರಿದಂತೆ ಇತರೆ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ ವಿಕಿರಣಗಳು ಹಾಗೂ ಅನುಸರಿಬೇಕಾದ ಸುರಕ್ಷತಾ ನೀತಿಗಳ ಅಧ್ಯಯನ ಇವರ ವಿಶೇಷತೆ. ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದು, ವೈಜ್ಞಾನಿಕ ವಿಷಯವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕ್ಯಾನ್ಸರ್, ಖಗೋಳ ವಿಜ್ಞಾನ, ಮಲೇರಿಯಾ, ಪರಮಾಣು, ತಳಿ ವಿಜ್ಞಾನ, ಕಾಲರಾ ವಿಷಯಗಳು ಕುರಿತದ್ದಾಗಿವೆ. ಕೃತಿಗಳು: ಆರೋಗ್ಯದ ಅಂಗಳದಲ್ಲಿ ವೈಜ್ಞಾನಿಕ ಪ್ರಗತಿ (ವೈದ್ಯಕೀಯ ಲೇಖನಗಳ ...
READ MORE