ವಿವಿಧ ತಲೆಮಾರುಗಳ ಸಾಧಕರ ಪರಿಚಯ ಈ ಕೃತಿಯಲ್ಲಿದೆ. ಲೇಖಕ ಜಿ.ಎನ್. ರಂಗನಾಥ್ ರಾವ್ ಅವರು ಈ ಸಾಧಕರ ಜೊತೆಗಿನ ಒಡನಾಟ, ವಿಶೇಷ ಅನುಭವಗಳು ಇವನ್ನೆಲ್ಲ ಇಟ್ಟುಕೊಂಡು ವ್ಯಕ್ತಿಯನ್ನು ಕಡೆದುನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲವು ಘಟನೆಗಳ ಮೂಲಕವೇ ಒಬ್ಬ ಸಾಧಕನ ವ್ಯಕ್ತಿತ್ವ ನಮ್ಮೊಳಗೆ ವಿಶಾಲವಾಗಿ ಹರಡುತ್ತಾ ಹೋಗುತ್ತದೆ. ಬಿಡಿ ಬಿಡಿ ಚಿತ್ರಣಗಳು ಕೊಡುವ ಒಳನೋಟಗಳು ಅವರ ಕುರಿತಂತೆ ಇನ್ನಷ್ಟು ಓದುವ ಆಸೆಯನ್ನು ಬಿತ್ತುತ್ತದೆ. ಎಚ್ಚೆಸ್ಕೆ, ಶೇಷಗಿರಿ ರಾವ್, ಚಂದ್ರಶೇಖರ ಪಾಟೀಲ, ಹಂಪನಾಗರಾಜ್, ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ, ಶಾಂತರಸ, ಜಿ. ವೆಂಕಟಸುಬ್ಬಯ್ಯ, ಶಾಂತರಸ, ಎಸ್. ದಿವಾಕರ್, ಗಿರಡ್ಡಿ ಗೋವಿಂದರಾಜ್, ಶಿವಮೊಗ್ಗ ಸುಬ್ಬಣ್ಣ, ಲಂಕೇಶ್, ಆರ್. ಕೆ. ನಾರಾಯಣ್, ಶಾಂತವೇರಿ, ಪ್ರೊ. ಯು. ಆರ್. ರಾವ್ ಹೀಗೆ ಹಲವಾರು ಸಾಧಕರ ವ್ಯಕ್ತಿಚಿತ್ರಣ ಈ ಕೃತಿಯಲ್ಲಿದೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE